ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಭಾರತದ ಪ್ರತಿನಿಧಿಗಳು ಪಾಕಿಸ್ತಾನವನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಮಂಗಳವಾರ ನಡೆದ ಅಧಿವೇಶನದಲ್ಲಿ ಭಾರತ ಪಾಕಿಸ್ತಾನ ತನ್ನದೇ ಜನರ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಿದೆ, ಆದರೆ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದೆ.
ಖೈಬರ್ ಪಖ್ತುನ್ಖ್ವಾದ ತಿರಾ ಕಣಿವೆಯಲ್ಲಿ ಪಾಕಿಸ್ತಾನಿ ವಾಯುಪಡೆಯು ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 24 ಜನರು ಮೃತಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ದೃಶ್ಯಗಳಲ್ಲಿ, ಕುಸಿದ ಕಟ್ಟಡಗಳು, ಸುಟ್ಟುಹೋದ ವಾಹನಗಳು ಮತ್ತು ಗಾಯಗೊಂಡ ನಾಗರಿಕರನ್ನು ರಕ್ಷಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಭಾರತೀಯ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ ತಮ್ಮ ಭಾಷಣದಲ್ಲಿ, ‘ಪಾಕಿಸ್ತಾನ ತನ್ನದೇ ಜನರ ಮೇಲೆ ದಾಳಿ ನಡೆಸುವ ಬದಲು, ತಮ್ಮ ಅಕ್ರಮ ಆಕ್ರಮಣಗಳಲ್ಲಿ ನಿಗ್ರಹ ಪಡೆಯುವುದು ಮತ್ತು ಭಯೋತ್ಪಾದನೆಯನ್ನು ತಡೆಯುವುದು ಉತ್ತಮ’ ಎಂದು ಹೇಳಿದ್ದಾರೆ.