Thursday, September 25, 2025

ಮ್ಯಾಚ್‌ ವೇಳೆ ದುರ್ವರ್ತನೆ ತೋರಿದ ಪಾಕ್‌ ಆಟಗಾರರ ವಿರುದ್ಧ ಐಸಿಸಿಗೆ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಝಾದಾ ಫರ್ಹಾನ್ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು ನೀಡಿದೆ.

ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ