Thursday, September 25, 2025

‘ರಗಾಸಾ’ ಚಂಡಮಾರುತದ ಅಬ್ಬರಕ್ಕೆ ಹಾಂಗ್‌ಕಾಂಗ್‌ ವಿಲವಿಲ: 20ಕ್ಕೂ ಹೆಚ್ಚು ಜನರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಗಾಸಾ ಚಂಡಮಾರುತದ ಅಬ್ಬರಕ್ಕೆ ತೈವಾನ್, ಫಿಲಿಪೈನ್ಸ್ ತತ್ತರಿಸಿ ಹೋಗಿದ್ದು, 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

ರಗಾಸಾ ಚಂಡಮಾರುತವು ಫಿಲಿಪೈನ್ಸ್, ತೈವಾನ್, ಹಾಂಗ್‌ಕಾಂಗ್ ಮತ್ತು ದಕ್ಷಿಣ ಚೀನಾವನ್ನು ವ್ಯಾಪಿಸಿದೆ. ಸದ್ಯ ಈ ದೇಶಗಳಲ್ಲಿ ಒಟ್ಟಾರೆ 20 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಸದ್ಯ ತೈವಾನ್ ಮತ್ತು ಫಿಲಿಪೈನ್ಸ್‌ನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತೈವಾನ್‌ನಲ್ಲಿ 14 ಜನ ಹಾಗೂ ಫಿಲಿಪೈನ್ಸ್‌ನಲ್ಲಿ 15 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ