ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿದ ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್ ನ FCRA ಪರವಾನಗಿಯನ್ನು ಕೇಂದ್ರ ಸರ್ಕಾರ ಗುರುವಾರ ರದ್ದುಗೊಳಿಸಿದೆ.
ಸೋನಮ್ ವಾಂಗ್ಚುಕ್ ಸ್ಥಾಪಿಸಿರುವ ಎಚ್‌ಐಎಲ್ ಮತ್ತು SECMOL ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇನ್ನೂ ಯಾವುದೇ FIR ದಾಖಲಾಗಿಲ್ಲವಾದರೂ, CBI ಅಧಿಕಾರಿಗಳು ಕಳೆದ ವಾರದಿಂದ ಲಡಾಖ್‌ನಲ್ಲಿದ್ದು, HIAL ಮತ್ತು SECMOL ನ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. FCRA ಅನುಮತಿ ಇಲ್ಲದೆ ವಿದೇಶಿ ನಿಧಿಯನ್ನು ಸ್ವೀಕರಿಸಿದ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯದ ದೂರಿನ ಮೇರೆಗೆ ತನಿಖೆ ನಡೆಸಲಾಗಿದೆ.
ಈ ಕುರಿತು ಮಾತನಾಡಿದ ವಾಂಗ್‌ಚುಕ್, CBI ತಂಡವು ಸುಮಾರು 10 ದಿನಗಳ ಹಿಂದೆ ಅಧಿಕೃತ ಆದೇಶದೊಂದಿಗೆ ಸಂಸ್ಥೆಗಳಿಗೆ ಭೇಟಿ ನೀಡಿತು. ವಿದೇಶಿ ದೇಣಿಗೆ ಸ್ವೀಕರಿಸುವ ಮೂಲಕ ನಾವು FCRA ಮಾನದಂಡಗಳನ್ನು ಉಲ್ಲಂಘಿಸಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಇವು UN, ಸ್ವಿಸ್ ವಿಶ್ವವಿದ್ಯಾಲಯ ಮತ್ತು ಇಟಾಲಿಯನ್ ಸಂಸ್ಥೆಯೊಂದಿಗೆ ಜ್ಞಾನ ಹಂಚಿಕೆ ಸೇವೆಗಳಿಗೆ ಪಾವತಿಗಳಾಗಿದ್ದು, ತೆರಿಗೆಗಳನ್ನು ಸರಿಯಾಗಿ ಪಾವತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.