Friday, September 26, 2025

ಇಂದಿನಿಂದ ಪ್ರವಾಸಿಗರಿಗೆ ಸಿಗಲಿದೆ ರಸದೌತಣ: KRS ಗೆ ಹೋಗೋಕೆ ಎಲ್ಲರೂ ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನ ಕಾರ್ಯಕ್ರಮ `ಕಾವೇರಿ ಆರತಿ’ಗೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ 5 ದಿನಗಳ ಕಾಲ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ.

ಕೆಆರ್‌ಎಸ್‌ ಬೋಟಿಂಗ್ ಪಾಯಿಂಟ್‍ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಗಂಟೆಗೆ ಡಿ.ಕೆ ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

ಕಾವೇರಿ ಆರತಿ ವೀಕ್ಷಣೆಗೆ ರಾಜ್ಯ, ಹೊರರಾಜ್ಯ ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇದೆ. ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದವಾಗಿ ಲಾಡು ವಿತರಣೆಗೆ ಸಿದ್ಧತೆ ಮಾಡಲಾಗಿದೆ. ಕಾವೇರಿ ಆರತಿ ಹಿನ್ನೆಲೆ ಕೆಆರ್‍ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಲಾಗಿದೆ. ಟೋಲ್ ಸಂಗ್ರಹದಲ್ಲೂ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ