Friday, September 26, 2025

ಕಲಬುರಗಿಯಲ್ಲಿ ವರುಣಾರ್ಭಟ ಜೋರು: ಧರೆಗುರುಳಿದ ಬೃಹದಾಕಾರದ ಮರ

ಹೊಸದಿಗಂತ ಕಲಬುರಗಿ

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಕಳೆದ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ ಬೃಹದಾಕಾರದ ಮರವೊಂದು ಧರೆಗುರುಳಿದೆ.

ನಗರದ ಶಹಾಬಜಾರ ಬಡಾವಣೆಯ ಮರಗಮ್ಮ ದೇವಸ್ಥಾನದ ಬಳಿಯ ಬೃಹದಾಕಾರದ ಬೇವಿನ ಮರವೊಂದು ಶುಕ್ರವಾರ ಬೆಳಗ್ಗೆ 8.45ರ ಸುಮಾರಿಗೆ ಧರೆಗುರುಳಿದೆ.

ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ.ಆದರೆ,ಒಂದು ಬೈಕ್ ಹಾಗೂ ಕಾರಿನ ಮೇಲೆ ಮರ ಬಿದ್ದು ಹಾನಿಯಾಗಿರುವ ಸಂಭವವಿದೆ.ಭಾರಿ ಮಳೆಯಿಂದಾಗಿ ಮರದ ಜೊತೆಗೆ ವಿದ್ಯುತ್ ಕಂಬ ಕೂಡ ಧರೆಗುರುಳಿದೆ.

ಇದನ್ನೂ ಓದಿ