ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲವಂತೆ! ಖುದ್ದು ಆರ್‌ಸಿಬಿ ಕಾಂಟಾಕ್ಟ್ ಮಾಡಿದರೂ ಕೊಹ್ಲಿ ಸಿಗ್ತಾ ಇಲ್ವಂತೆ? ಹಾಗಿದ್ರೆ ಕೊಹ್ಲಿ ಅಷ್ಟೊಂದು ಬ್ಯುಸಿನಾ? ಬ್ಯುಸಿ ಇದ್ರೆ ಯಾವ ಕೆಲಸದಲ್ಲಿ ಬ್ಯುಸಿ? ಇಲ್ಲಿದೆ ಡೀಟೇಲ್ಸ್..
ಐಪಿಎಲ್ ಮುಗಿದಿದ್ದೇ ಮುಗಿದಿದ್ದು ವಿರಾಟ್ ಕೊಹ್ಲಿ & ಫ್ಯಾಮಿಲಿ ಹಾರಿದ್ದು ಲಂಡನ್ಗೆ, ಕಳೆದ ಎರಡು ತಿಂಗಳಿಂದ ಲಂಡನ್ನಲ್ಲೇ ಬೀಡುಬಿಟ್ಟಿರುವ ವಿರಾಟ್, ಆಗೊಮ್ಮೆ, ಈಗೊಮ್ಮೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು ಬಿಟ್ರೆ, ಫ್ಯಾನ್ಸ್ ಕಣ್ಣಿಗೆ ಸಿಕ್ಕಿಲ್ಲ.
ಲಂಡನ್ನಲ್ಲೇ ಫಿಟ್ನೆಸ್ ಟೆಸ್ಟ್ ಮುಗಿಸಿದ್ದ ವಿರಾಟ್, ಇನ್ನೇನು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಬೇಕು. ಇದೇ ವಿಚಾರವಾಗಿ ಚರ್ಚಿಸಲು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಕೆಲ ದಿನಗಳ ಹಿಂದಷ್ಟೇ ಕಾಲ್ ಮಾಡಿದ್ದಾರೆ. ಆದ್ರೆ, ಅಜಿತ್ ಅಗರ್ಕರ್ ಪೋನ್ ಕರೆಗೂ ಸಿಗದ ಬ್ಯುಸಿಯಲ್ಲಿದ್ದಾರೆ. ಅಜಿತ್ ಅಗರ್ಕರ್ ಇರಲಿ, ಆರ್ಸಿಬಿಯ ಮ್ಯಾನೇಜ್ಮೆಂಟ್ಗೂ ವಿರಾಟ್ ಸಿಕ್ಕಿಲ್ಲ.
ಲಂಡನ್ನಲ್ಲಿ ಕಿಂಗ್ ಕೊಹ್ಲಿ ಸಿಂಪಲ್ ಲೈಫ್ ಸ್ಪೆಂಡ್ ಮಾಡ್ತಿದ್ದಾರೆ. ಸಾಮಾನ್ಯರಲ್ಲಿ ಸಾಮನ್ಯತರಂತೆ ಜೀವನ ನಡೆಸ್ತಿರುವ ವಿರಾಟ್,ಫ್ಯಾಮಿಲಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ. ಫ್ಯಾಮಿಲು ಜೊತೆ ಫುಲ್ ಬ್ಯುಸಿಯಾಗಿರುವ ವಿರಾಟ್, ಶಾಪಿಂಗ್ ಬಳಿಕ ಕಾರ್ ಬ್ಯಾಕ್ ಡೋರ್ನಲ್ಲಿ ವಸ್ತಗಳನ್ನು ಜೋಡಿಸ್ತಾ ಕಾಣಿಸಿಕೊಂಡಿದ್ದಾರಷ್ಟೆ!