Saturday, September 27, 2025

ಅಮೆರಿಕದಿಂದ H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ: ಈ ಕುರಿತು ವಿದೇಶಾಂಗ ಇಲಾಖೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

H-1B ವೀಸಾ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಚ್ಚಿಸಿದ್ದು, ಆಡಳಿತ ಭಾರತೀಯರಿಗೆ ದೊಡ್ಡ ಮಟ್ಟದ ಆಘಾತವನ್ನು ಉಂಟುಮಾಡಿದೆ.

ಇದೀಗ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಭಾರತ ಅಮೆರಿಕದ ಜೊತೆ ಚರ್ಚೆ ನಡೆಸಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾತನಾಡಿದ್ದು , H-1B ವೀಸಾಗಳಿಗೆ 100,000 ಶುಲ್ಕ ವಿಧಿಸುವ ಟ್ರಂಪ್ ಆಡಳಿತದ ಕ್ರಮಕ್ಕೆ ನಿಯಮಗಳನ್ನು ರೂಪಿಸುವ ಬಗ್ಗೆ ಭಾರತವು ಅಮೆರಿಕ ಮತ್ತು ಇತರ ಪಾಲುದಾರರೊಂದಿಗೆ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

H-1B ವೀಸಾ ಕಾರ್ಯಕ್ರಮದಲ್ಲಿ ಬದಲಾವಣೆಗಳಿಗೆ ಪ್ರಸ್ತಾವಿತ ನಿಯಮ ರಚನೆಗೆ ಸಂಬಂಧಿಸಿದಂತೆ ಅಮೆರಿಕದ ಗೃಹ ಭದ್ರತಾ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಉಲ್ಲೇಖಿಸಿ, ಉದ್ಯಮ ಮತ್ತು ಇತರರು ಸೇರಿದಂತೆ ಪಾಲುದಾರರಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.

ಅಮೆರಿಕಕ್ಕೆ ಕೌಶಲ್ಯಪೂರ್ಣ ವೃತ್ತಿಪರರ ವಲಸೆ ಎರಡೂ ದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಭಾರತ ನಂಬುತ್ತದೆ. ನಾವು ಉದ್ಯಮ ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ತೊಡಗಿಸಿಕೊಂಡಿರಲು ಬಯಸುತ್ತೇವೆ ಮತ್ತು ಈ ಅಂಶಗಳನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.