ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದೆ.ಶ್ರೀಲಂಕಾಗೆ ಗೆಲ್ಲಲು 203 ರನ್ ಗಳ ಬೃಹತ್ ಗುರಿ ನೀಡಿದೆ.
ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರೆ, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಕೊನೆಯ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ಓವರ್ನಲ್ಲೇ ಶುಭ್ಮನ್ ಗಿಲ್ (4) ವಿಕೆಟ್ ಕಳೆದುಕೊಂಡಿತು. ನಂತರ 2ನೇ ವಿಕೆಟ್ಗೆ ಒಂದಾದ ಅಭಿಷೇಕ್ ಹಾಗೂ ನಾಯಕ ಸೂರ್ಯಕುಮಾರ್ 33 ಎಸೆತಗಳಲ್ಲಿ 59 ರನ್ಗಳ ಜೊತೆಯಾಟ ನೀಡಿದರು. ಇದರಲ್ಲಿ ನಾಯಕ ಸೂರ್ಯಕುಮಾರ್ ಪಾತ್ರ ಕೇವಲ 12 ರನ್. ಸೂರ್ಯ ಬೆನ್ನಲ್ಲೆ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 61 ರನ್ಗಳಿಸಿದ್ದ ಅಭಿಷೇಕ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು.
4ನೇ ವಿಕೆಟ್ಗೆ ಒಂದಾದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಭಾರತವನ್ನ ದಿಢೀರ್ ಕುಸಿತದಿಂದ ಪಾರು ಮಾಡಿ ಸ್ಕೋರ್ ಗತಿಯನ್ನು ಹೆಚ್ಚಿಸಿದರು. ಸಂಜು ಸ್ಯಾಮ್ಸನ್ 39 ರನ್ಗಳಿಸಿದರೆ, ತಿಲಕ್ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 49 ರನ್ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 21 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಲು ನೆರವಾದರು.