ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಐ ಲವ್ ಮುಹಮ್ಮದ್’ ಅಭಿಯಾನ ಉಲ್ಬಣಗೊಂಡ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ ಟಕ್ಕರ್ ಕೊಡಲು
ಐ ಲವ್ ಯೋಗಿ ಆದಿತ್ಯನಾಥ್’ ಅಭಿಯಾನ ಪ್ರಾರಂಭಿಸಿದೆ.
`ಐ ಲವ್ ಯೋಗಿ ಆದಿತ್ಯನಾಥ್’, ‘ಐ ಲವ್ ಬುಲ್ಡೋಜರ್’ ಹೆಸರಿನಲ್ಲಿ ಬಿಜೆಪಿ ಯುವ ಮೋರ್ಚಾ ಅಭಿಯಾನ ಆರಂಭಿಸಿದ್ದು, ಲಕ್ನೋದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಮಿತ್ ತ್ರಿಪಾಠಿ ನೇತೃತ್ವದಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ.
`ಐ ಲವ್ ಮುಹಮ್ಮದ್’ ಫ್ಲೆಕ್ಸ್ ವಿಚಾರವಾಗಿ ಕಾನ್ಪುರದಲ್ಲಿ ಮೊದಲು ವಿವಾದ ಆರಂಭವಾಗಿತ್ತು. ಶುಕ್ರವಾರ ಬರೇಲಿಯಲ್ಲಿ ನಡೆದ ಪ್ರತಿಭಟನೆ ಹಿಂಸತ್ಮಾಕ ಸ್ವರೂಪ ಪಡೆದುಕೊಂಡಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಲಾಠಿಚಾರ್ಜ್ ಮಾಡಲಾಗಿದೆ. ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಭದ್ರತೆ ಆರ್‌ಎಎಫ್ ಮತ್ತು ಪಿಎಸಿ ನಿಯೋಜನೆ ಮಾಡಲಾಗಿದೆ.