ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ವೇದಿಕೆ ರೂಪುಗೊಂಡಿರುವುದು ಏಷ್ಯಾಕಪ್ ಫೈನಲ್ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದೆ.
ಈ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು, ಅವರ ಅಹಂಕಾರವನ್ನು ಮುಗಿಸಬೇಕೆಂದು ಪಾಕಿಸ್ತಾನ್ ವೇಗಿ ಶೊಯೆಬ್ ಅಖ್ತರ್ ತಮ್ಮ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಚರ್ಚೆಯೊಂದರಲ್ಲಿ ಮಾತನಾಡಿದ ಶೊಯೆಬ್ ಅಖ್ತರ್, ಭಾನುವಾರ ಪಾಕಿಸ್ತಾನ್ ತಂಡ ಭಾರತದ ಅಹಂಕಾರವನ್ನು ಮುಗಿಸಬೇಕು. ಪಾಕಿಸ್ತಾನ್ ಕೂಡ ಅದೇ ಮನೋಭಾವದಿಂದ ಕಣಕ್ಕಿಳಿಯುವುದನ್ನು ಎದುರು ನೋಡುತ್ತೇನೆ. ನಿಮ್ಮೊಡನೆ ಆಡಿದ್ರೆ, ನೀವು ಏನು ಮಾಡಬಲ್ಲಿರಿ ಎಂಬುದನ್ನು ಭಾರತಕ್ಕೆ ತೋರಿಸಿ ಎಂದು ಶೊಯೆಬ್ ಅಖ್ತರ್ ಪಾಕಿಸ್ತಾನ್ ತಂಡವನ್ನು ಬೆಂಬಲಿಸಿದ್ದಾರೆ.
ಇತ್ತ ಟೀಮ್ ಇಂಡಿಯಾ ಒಂದೇ ಟೂರ್ನಿಯಲ್ಲಿ ಪಾಕಿಸ್ತಾನ್ ಪಡೆಯನ್ನು ಮೂರು ಬಾರಿ ಸೋಲಿಸಿ, ಹ್ಯಾಟ್ರಿಕ್ ವಿಜಯದೊಂದಿಗೆ ಹೊಸ ಇತಿಹಾಸ ಬರೆಯುವ ತವಕದಲ್ಲಿದ್ದಾರೆ.