Sunday, September 28, 2025

ದಿನಭವಿಷ್ಯ :ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷ
ಸಂಭ್ರಮದ ದಿನ. ಮನೆಯವರ ಜತೆ ಆತ್ಮೀಯ ಕಾಲಕ್ಷೇಪ. ಬಂಧು ಭೇಟಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ.    
ವೃಷಭ
ನಿಮ್ಮನ್ನು ಕಾಡುವ ಸಮಸ್ಯೆ ತಾನಾಗಿ ಪರಿಹಾರ ಕಾಣುವುದು ಎಂದು ಕಾಯಬೇಡಿ. ಅದಕ್ಕೆ  ಪ್ರಯತ್ನವೂ ಬೇಕು. ಮನೆಯಲ್ಲಿ ಸಂಭ್ರಮ.  
ಮಿಥುನ
ಮನೆಯಲ್ಲಿ ಅಸಹಕಾರ ಎದುರಿಸುವಿರಿ. ಕೌಟುಂಬಿಕ ಭಿನ್ನಮತ. ಸಂಗಾತಿ ಜತೆ ಹೊಂದಾಣಿಕೆ ಇರಲಿ.  ಸಂಯಮವೂ ಮುಖ್ಯ.
ಕಟಕ
ಕಠಿಣ ಪರಿಸ್ಥಿತಿ ಎದುರಿಸಬಲ್ಲ ದೃಢ ಮನೋಭಾವ ಪ್ರದರ್ಶಿಸುವಿರಿ.
ಸಿಂಹ
ಕೆಲವು ವಿಷಯದ ಕುರಿತು ಅತಿಯಾಗಿ ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುವಿರಿ. ಸಮಸ್ಯೆ ಮುಗಿಯದು ಎಂಬ ಹತಾಶೆ ಬಿಟ್ಟುಬಿಡಿ.  
ಕನ್ಯಾ
ನೀವು ಎಣಿಸಿದಂತೆ ಯಾವುದೂ ಸಾಗುತ್ತಿಲ್ಲ ಎಂಬ ಹತಾಶೆ. ದೊಡ್ಡ ಮಟ್ಟದ ಹೂಡಿಕೆ ಮಾಡಬೇಡಿ. ನಿರೀಕ್ಷಿತ ಫಲ ದೊರಕದು.
ತುಲಾ
ನಿಮ್ಮ ಪಾಲಿಗೆ ಇಂದು ಸಾಧಾರಣ ದಿನ. ವ್ಯವಹಾರ ಸುಗಮವಾಗಿ ಸಾಗಿದರೂ ಅತೃಪ್ತಿ.  ವಾಗ್ವಾದಕ್ಕೆ ಆಸ್ಪದ ನೀಡಬೇಡಿ.
ವೃಶ್ಚಿಕ
ವ್ಯವಹಾರದಲ್ಲಿ   ಒತ್ತಡ ಹೆಚ್ಚಾದರೂ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಹೊಂದಿಕೊಳ್ಳುವ ಸ್ವಭಾವ ನೆರವಿಗೆ ಬರಲಿದೆ.      
ಧನು
ಕೆಲಸದ ಒತ್ತಡ ಕಡಿಮೆ. ಇಂದಿನ ನಿಮ್ಮ ನಿರ್ಧಾರ ಉತ್ತಮ ಫಲ ನೀಡಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿವಾರಣೆ. ಅಽಕ ಧನವ್ಯಯ.  
ಮಕರ
ನಿಮ್ಮ ಸುತ್ತ ಕೆಲವು ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಿ. ಅನವಶ್ಯ ಖರ್ಚು ನಿಯಂತ್ರಿಸಿ. ಸಂಸಾರದಲ್ಲಿ ವಾಗ್ವಾದ.        
ಕುಂಭ
 ನಿಮಗೆ ಪೂರಕ ಪರಿಸ್ಥಿತಿ. ಉದ್ವಿಗ್ನತೆ ನಿವಾರಣೆ. ಕುಟುಂಬದಲ್ಲಿ ಮೂಡಿದ್ದ ಭಿನ್ನಮತ ಪರಿಹಾರ. ಸಹಕಾರ ಮನೋಭಾವ ಒಳಿತು.    
 ಮೀನ
ಹೆಚ್ಚು ಕಾರ್ಯ. ಮನಸ್ಸು ವಿಚಲಿತ. ಯಾವುದೋ ವಿಷಯದಲ್ಲಿ  ತಲ್ಲಣ. ಕೌಟುಂಬಿಕ ಮನಸ್ತಾಪ ಸಂಭವ.