ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿರುವ ಯುವ ಎಡಗೈ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮುಂಬರುವ ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಅಕ್ಟೋಬರ್ 15ರಿಂದ ಶುರುವಾಗಲಿರುವ ರಣಜಿ ಟೂರ್ನಿಯಲ್ಲಿ ಇಶಾನ್ ಕಿಶನ್ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜೊತೆಗೆ ನಾಯಕತ್ವವನ್ನು ನಿರ್ವಹಿಸಲಿದ್ದಾರೆ.
ಇಶಾನ್ ಕಿಶನ್ ಮುಂಬರುವ ಟೂರ್ನಿಗೆ ಸಿದ್ಧತೆಯೊಂದಿಗೆ ತಮ್ಮ ಪ್ರದರ್ಶನ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಮರಳಲು ಎಲ್ಲ ತಯಾರಿ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಇಶಾನ್ ಇರಾನಿ ಕಪ್ ಟೂರ್ನಿಗಾಗಿ ಶೇಷ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು ಮತ್ತು ಅಕ್ಟೋಬರ್ 1ರಿಂದ ಹಾಲಿ ರಣಜಿ ಚಾಂಪಿಯನ್ ವಿದರ್ಭ ತಂಡದ ವಿರುದ್ಧ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಸರಣಿಯಲ್ಲಿಯ 3 ಇನಿಂಗ್ಸ್ ಗಳಲ್ಲಿ 78 ರನ್ ಗಳಿಸಿ ಅರ್ಧಶತಕ ಸಾಧಿಸಿದ ಇಶಾನ್, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ತಂಡದಿಂದ ಹೊರಬಂದಿದ್ದರು. ಆದರೆ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯಕ್ಕೆ ರಿಷಭ್ ಪಂತ್ ಬದಲಿಯಾಗಿ ಆಯ್ಕೆಯಾಗಿದ್ದರು.
ಗಾಯದಿಂದ ಹೊರಗುಳಿದ ಇಶಾನ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಶೇಷ ಭಾರತ ತಂಡದೊಂದಿಗೆ, ಜಾರ್ಖಂಡ್ ತಂಡದ ನಾಯಕತ್ವದಲ್ಲಿ ತಮ್ಮ ಸೈಧ್ಧಾಂತಿಕ ಮತ್ತು ಕೌಶಲ್ಯವನ್ನು ತೋರಲು ಸಜ್ಜಾಗಿದ್ದಾರೆ. ಜಾರ್ಖಂಡ್ ತಂಡದಲ್ಲಿ ವಿರಾಟ್ ಸಿಂಗ್, ಶರಣದೀಪ್ ಸಿಂಗ್, ಶಿಖರ್ ಮೋಹನ್, ಕುಮಾರ್ ಕುಶಾಗ್ರಾ ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರು ಸೇರಿದ್ದಾರೆ.