Monday, September 29, 2025

ಭಾರತೀಯ ಸೇನೆಗೆ ಸಿಗಲಿದೆ ‘ಅನಂತ್ ಶಸ್ತ್ರ’ ಬಲ: ಏರ್ ಮಿಸೈಲ್ ಖರೀದಿಗೆ ಮುಂದಾದ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಕ್ಷಣಾ ಕ್ಷೇತ್ರದಲ್ಲಿ ಭಾರತ ತನ್ನ ಸಾಮರ್ಥ್ಯ ಹೆಚ್ಚುಸುತ್ತಿದೆ. ವಾಯು ರಕ್ಷಣೆ ಬಲಪಡಿಸಲು ಭಾರತೀಯ ಸೇನೆ ‘ಅನಂತ್ ಶಸ್ತ್ರ’ ಎನ್ನುವ ಏರ್ ಮಿಸೈಲ್ ಸಿಸ್ಟಂಗಳನ್ನು ಖರೀದಿಸುತ್ತಿದೆ.

ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ ಅನಂತ ಶಸ್ತ್ರ ಕ್ಷಿಪಣಿ ಗುತ್ತಿಗೆ ಸಿಕ್ಕಿದೆ. ಐದರಿಂದ ಆರು ರೆಜಿಮೆಂಟ್​ಗಳ ಅನಂತ ಶಸ್ತ್ರ ಕ್ಷಿಪಣಿ ಸಿಸ್ಟಂಗಳ ಖರೀದಿಗೆ ಗುತ್ತಿಗೆ ನೀಡಲಾಗಿದೆ.ಇದು 30,000 ಕೋಟಿ ರೂ ಮೌಲ್ಯದ ಬೃಹತ್ ಪ್ರಾಜೆಕ್ಟ್ ಆಗಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಅನಂತ ಶಸ್ತ್ರವು ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ ಆಗಿದೆ.

ಅನಂತ ಶಸ್ತ್ರ ಏರ್ ಡಿಫೆನ್ಸ್ ಸಿಸ್ಟಂಗಳು ಬಹಳ ನಿಖರವಾಗಿ ಗುರಿಗಳಿಗೆ ಹೊಡೆಯಲು ಸಮರ್ಥವಾಗಿವೆ. ಇವುಗಳ ಶ್ರೇಣಿ 30 ಕಿಮೀ ಇದೆ. ಭಾರತದಲ್ಲಿ ಈಗಾಗಲೇ ದೇಶೀಯ ನಿರ್ಮಿತ ಉತ್ತಮ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಎಂಆರ್​ಎಸ್​ಎಎಂ, ಆಕಾಶ್ ಸಿಸ್ಟಂಗಳಿವೆ. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್​ನಲ್ಲಿ ಭಾರತದ ದೇಶೀಯ ಶಸ್ತ್ರಾಸ್ತ್ರಗಳು ಗಮನಾರ್ಹ ಪಾತ್ರ ವಹಿಸಿದ್ದವು.