January15, 2026
Thursday, January 15, 2026
spot_img

ಯಾದಗಿರಿ: ವರುಣನ ಆರ್ಭಟಕ್ಕೆ ಶತಮಾನಗಳ ಐತಿಹಾಸಿಕ ಕೋಟೆ ಗೋಡೆ ಕುಸಿತ


ಹೊಸದಿಗಂತ ಯಾದಗಿರಿ:

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹೃದಯ ಭಾಗದಲ್ಲಿನ ಐತಿಹಾಸಿಕ ಕೋಟೆ ಗೋಡೆ ಸೋಮವಾರ ನಸುಕಿನ‌ ಜಾವ ಕುಸಿದೆ.

ಮಾನ್ಯಕೇಟದ ರಾಷ್ಟ್ರಕೂಟರು, ಯಾದವರು ನಿರ್ಮಿಸಿದ ಇತಿಹಾಸ ಹೊಂದಿರುವ ಹಾಗೂ ಶತಮಾನಗಳ ಐತಿಹ್ಯ ಹೊಂದಿರುವ ಕೋಟೆಯ ಗೋಡೆ ಕುಸಿದಿರುವುದು ನಗರದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಸಧ್ಯ ನಾಡಹಬ್ಬ ದಸರಾ ನಡೆಯುತ್ತಿದ್ದು, ಕೋಟೆಯ ಮೇಲಿನ ಭುವನೇಶ್ವರಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕೋಟೆಗೋಡೆ‌‌ ಕುಸಿದ ಕಾರಣ ಜಿಲ್ಲಾಡಳಿತ ಕೂಡಲೇ ಅಲರ್ಟ್ ಆಗಿ ಜನತೆಗೆ ಎಚ್ಚರಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Most Read

error: Content is protected !!