ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪಾಲ್ಘರ್‌ನ ಕಾಶಿಪಡ ಪ್ರದೇಶದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಪಲ್ಲವಿ ಧುಮ್ಡೆ ಎಂಬಾಕೆ ತನ್ನ 7 ವರ್ಷದ ಮಗ ಚಿನ್ಮಯ್ ನನ್ನು ಲಟ್ಟಣಿಗೆಯಿಂದ ಹೊಡೆದು ಮಗುವನ್ನು ಸಾಯಿಸಿದ್ದು ಜೊತೆಗೆ 10 ವರ್ಷದ ಸೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಚಿನ್ಮಯ್ ತಾಯಿಯ ಬಳಿ ಚಿಕನ್ ಕರಿ ಬೇಕೆಂದು ಹಠ ಹಿಡಿದಾಗ ತಾಯಿ ಕೋಪಗೊಂಡು ಮಗನ ಮೇಲೆ ಚಪಾತಿ ಮಾಡುವ ಲಟ್ಟಣಿಗೆಲಟ್ಟಣಿಗೆಯಿಂದ ಹೊಡೆದಿದ್ದಾರೆ. ಇದರ ಪರಿಣಾಮ ಚಿನ್ಮಯ್ ಸ್ಥಳದಲ್ಲೇ ಮೃತಪಟ್ಟಿದ್ದು, 10 ವರ್ಷದ ಮಗಳು ಗಂಭೀರ ಗಾಯಗೊಂಡು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳ ಕೂಗಾಟದ ಬಗ್ಗೆ ನೆರೆಮನೆಯವರು ಮಾಹಿತಿ ನೀಡಿದ ನಂತರ, ಪೊಲೀಸ್‌ಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಾಯಿ ಪಲ್ಲವಿ ಧುಮ್ಡೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 40 ವರ್ಷದ ಪಲ್ಲವಿ ತಮ್ಮ ಕುಟುಂಬದೊಂದಿಗೆ ಕಾಶಿಪಡ ಪ್ರದೇಶದಲ್ಲಿ ಪ್ರದೇಶದಲ್ಲಿ ವಾಸವಾಗಿದ್ದರು.