ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಿಂದ ಡೊನಾಲ್ಡ್ ಟ್ರಂಪ್ ಕಾಂತಾರ ಸೇರಿದಂತೆ ಭಾರತದ ಎಲ್ಲಾ ಸಿನಿಮಾಗಳಿಗೂ ಎಫೆಕ್ಟ್ ಆಗುವ ರೀತಿಯ ನಿರ್ಧಾರ ಘೋಷಣೆ ಮಾಡಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ಚಲನಚಿತ್ರೋದ್ಯಮವನ್ನು ವಿದೇಶಗಳು ಕಳ್ಳತನ ಮಾಡಿವೆ ಎಂದು ಹೇಳಿಕೊಂಡಿದ್ದು, ಈ ಪರಿಸ್ಥಿತಿಯನ್ನು ‘ಮಗುವಿನಿಂದ ಕ್ಯಾಂಡಿ ಕದಿಯುವುದಕ್ಕೆ’ ಹೋಲಿಸಿದ್ದಾರೆ.
ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೀರ್ಘಕಾಲದ, ಎಂದಿಗೂ ಮುಗಿಯದ ಸಮಸ್ಯ ಪರಿಹರಿಸಲು, ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ಘೋಷಣೆ ಮಾಡಿದ್ದಾರೆ. ಅವರ ಗಮನ ಹಾಲಿವುಡ್ ಮೇಲೆ ಇದ್ದರೂ, ಈ ಘೋಷಣೆಯು ಎಲ್ಲಾ ವಿದೇಶಿ ಚಲನಚಿತ್ರಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಭಾರತೀಯ ಸಿನಿಮಾ ಕೂಡ ಅದರ ಪರಿಣಾಮವನ್ನು ಅನುಭವಿಸಲಿದೆ. ‘ಮೇಕ್ ಅಮೆರಿಕಾ ಗ್ರೇಟ್ ಅಗೇನ್’ ಎನ್ನುವ ಘೋಷಣೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಸಿನಿಮಾಗಳಿಗೆ ಅಮೆರಿಕ ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಉದ್ಯಮದ ಮೂಲಗಳು ಅಂದಾಜಿನ ಪ್ರಕಾರ ಇದು ವಿದೇಶಿ ಕಲೆಕ್ಷನ್‌ನಲ್ಲಿ 30–40% ರಷ್ಟಿದೆ ಮತ್ತು ತೆಲುಗು ಚಿತ್ರಗಳಿಗೆ, ತೆಲಂಗಾಣದ ನಂತರ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿದೆ. ದೊಡ್ಡ ಟಿಕೆಟ್ ತೆಲುಗು ಬಿಡುಗಡೆಗಳು ತಮ್ಮ ಬಾಕ್ಸ್ ಆಫೀಸ್ ಗಳಿಕೆಯ 25% ವರೆಗೆ ಅಮೆರಿಕದಿಂದಲೇ ಪಡೆಯುತ್ತಿತ್ತು. ಈ ಚಲನಚಿತ್ರಗಳು ಸಾಮಾನ್ಯವಾಗಿ ದೇಶಾದ್ಯಂತ 700–800 ಸ್ಥಳಗಳಲ್ಲಿ ಬಿಡುಗಡೆಯಾಗುತ್ತವೆ.