ಮೇಷ
ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಂಡ ನಿರಾಳತೆ. ಆಪ್ತರಿಂದ ಸಹಕಾರ. ವೃತ್ತಿ ವ್ಯವಹಾರ ಸುಗಮ, ಒತ್ತಡ ನಿವಾರಣೆ.
ವೃಷಭ
ಭಾವುಕ ಸನ್ನಿವೇಶ ಸೃಷ್ಟಿ. ಮನಸ್ಸಿಗೆ ನೋವು. ನಿಮ್ಮ ದೌರ್ಬಲ್ಯ ಪ್ರದರ್ಶಿಸಬೇಡಿ. ಆಪ್ತರ ಜತೆಗೆ ಜಗಳವನ್ನು ಸಾಧ್ಯವಾದಷ್ಟು ತಪ್ಪಿಸಿ.
ಮಿಥುನ
ಮನಸ್ಸಿನಲ್ಲಿ ನಿರಾಶೆ, ಅಸಂತೋಷ. ಅದಕ್ಕೆ ಕೆಲವು ಕಾರಣವಿದ್ದೀತು.
ಸಮಸ್ಯೆಯನ್ನು ಪರಿಹರಿಸಲು ನೋಡಿ.ಕೊರಗುತ್ತಾ ಕೂರಬೇಡಿ.
ಕಟಕ
ಪ್ರಮುಖ ಕಾರ್ಯ ಈಡೇರಲಿದೆ. ನೆಗೆಟಿವ್ ಚಿಂತನೆ ತೊಲಗಲಿದೆ. ಹಾಗಾಗಿ ನಿರಾಳತೆ. ಕೆಲಸದ ಒತ್ತಡದಿಂದಲೂ ನಿಮಗೆ ಮುಕ್ತಿ.
ಸಿಂಹ
ಮನದಲ್ಲಿ ಏನೋ ಕೊರಗು. ನೀವು ಬಯಸಿದ ಬೆಳವಣಿಗೆ ಆಗಿಲ್ಲವೆಂಬ ನಿರಾಶೆ. ತಾಳ್ಮೆಯಿಂದ ಕಾದರೆ ನಿಮಗೆ ಒಳಿತಾಗಲಿದೆ.
ಕನ್ಯಾ
ಈ ದಿನ ನಿರುತ್ಸಾಹ ಕಾಡಲಿದೆ. ಆರೋಗ್ಯದ ಚಿಂತೆ. ಕೆಲಸವೊಂದು ಇನ್ನೂ ಪೂರೈಸದ ಹತಾಶೆ. ಬಂಧುಗಳಿಂದ ಟೀಕೆ. ಸಂಯಮ ವಹಿಸಿ.
ತುಲಾ
ನಿಮ್ಮ ಆತ್ಮೀಯ ವ್ಯಕ್ತಿಗಳು ನಿಮ್ಮನ್ನು ಅಸಡ್ಡೆ ಮಾಡುತ್ತಿರುವ ಕೊರಗು ಕಾಡಬಹುದು. ಅಂತಹ ಶಂಕೆಗೆ ಎಡೆಯಿಲ್ಲ. ಎಲ್ಲರಲ್ಲಿ ವಿಶ್ವಾಸವಿರಲಿ.
ವೃಶ್ಚಿಕ
ನಿಮ್ಮ ಖಾಸಗಿ ಬದುಕಿನಲ್ಲಿ ಏರುಪೇರು ಉಂಟಾದೀತು. ನೀವು ಬಯಸದ ಬೆಳವಣಿಗೆ ಸಂಭವ. ಸ್ಥಿತಪ್ರಜ್ಞರಾಗಿ ವ್ಯವಹರಿಸಿರಿ.
ಧನು
ಇತ್ತೀಚಿನ ಕೆಲವು ಬೆಳವಣಿಗೆ ನಿಮ್ಮ ಆಶಾವಾದ ಹೆಚ್ಚಿಸಲಿದೆ. ಉನ್ನತಿಯ ಹಾದಿ ತೋರಿಬರಲಿದೆ. ವಿರೋಧ ಕೊನೆಗಾಣಲಿದೆ.
ಮಕರ
ಅಶಾಂತ ಮನಸ್ಥಿತಿ. ನೀವು ಬಯಸಿದ ಬೆಳವಣಿಗೆ ಆಗದಿರುವುದು ಅದಕ್ಕೆ ಕಾರಣ. ಒತ್ತಡದ ಕಾರ್ಯ ಬದಿಗಿಡಿ. ನಿರಾಳವಾಗಿರಲು ಯತ್ನಿಸಿ.
ಕುಂಭ
ಸಮಸ್ಯೆಯಿಂದ ಮುಕ್ತಿ. ಚಿಂತೆ ಪರಿಹಾರ. ಕೆಲದಿನಗಳ ಬಳಿಕ ಮುಖದಲ್ಲಿ ನಗು ಮೂಡಲಿದೆ. ಖರೀದಿಯ ಹುಮ್ಮಸ್ಸು.
ಮೀನ
ಆದ್ಯತೆಯ ಕೆಲಸ ಮೊದಲು ಮುಗಿಸಿ. ಪ್ರೀತಿ, ಕುಟುಂಬ, ಕೆಲಸದ ಮಧ್ಯೆ ಸಮನ್ವಯ ಸಾಧಿಸಿರಿ. ಮಾನಸಿಕ ಕ್ಲೇಶ ಕಳೆಯಲಿದೆ.
ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ
