Thursday, October 2, 2025

ಜಾರ್ಖಂಡ್‌ನಿಂದ ‘ಕಳುವಾಗಿದ್ದ ಹೆಣ್ಣಾನೆ’ ಬಿಹಾರದಲ್ಲಿ ಪತ್ತೆ! ಸಿಕ್ಕಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾರ್ಖಂಡ್‌ನ ಪಲಾಮು ಜಿಲ್ಲೆಯಿಂದ ಕದ್ದು ರೂ. 27 ಲಕ್ಷಕ್ಕೆ ಮಾರಾಟವಾಗಿದ್ದ ಹೆಣ್ಣಾನೆಯನ್ನು ಬಿಹಾರದ ಚಾಪ್ರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪಲಾಮು ಜಿಲ್ಲೆಯ ಚುಕುರ್ ಪ್ರದೇಶದಲ್ಲಿ ಹೆಣ್ಣಾನೆ ಜಯಮತಿ ಕಳ್ಳತನದ ಬಗ್ಗೆ ಉತ್ತರ ಪ್ರದೇಶದ ಮಿರ್ಜಾಪುರದ ನಿವಾಸಿ ನರೇಂದ್ರ ಕುಮಾರ್ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ಪೊಲೀಸ್ ದೂರು ನೀಡಿದ್ದರು.

ಶುಕ್ಲಾ ಅವರು ರಾಂಚಿಯಿಂದ ರೂ. 40 ಲಕ್ಷಕ್ಕೆ ಆ ಆನೆಯನ್ನು ಖರೀದಿಸಿದ್ದರು. ಈ ಸಂಬಂಧ ಸದರ್ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಆದರೆ ಸೋಮವಾರ ಬಿಹಾರದ ಛಪ್ರಾದ ಪಹಾದ್‌ಪುರದಲ್ಲಿ ಕಾಣೆಯಾಗಿದ್ದ ಆನೆ ಬಗ್ಗೆ ಸುಳಿವು ಸಿಕ್ಕಿತು, ತದನಂತರ ಸಹಾಯಕ್ಕಾಗಿ ಬಿಹಾರ ಪೊಲೀಸರಿಗೆ ಮನವಿ ಮಾಡಿದ್ದೇವು ಎಂದು ಮೇದಿನಿನಗರದ ಎಸ್‌ಡಿಪಿಒ ಮಣಿಭೂಷಣ ಪ್ರಸಾದ್ ತಿಳಿಸಿದ್ದಾರೆ.

ತನಿಖೆ ವೇಳೆಯಲ್ಲಿ ಆನೆಯನ್ನು ಚಾಪ್ರಾದಿಂದ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ. ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು.