January22, 2026
Thursday, January 22, 2026
spot_img

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ! 10 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನದ ಪ್ಯಾರಾಮಿಲಿಟರಿಯ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಪ್ರಬಲವಾದ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ ಮತ್ತು 30 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್‌ಸಿ(ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಎದುರು ತಮ್ಮ ವಾಹನವನ್ನು ಸ್ಫೋಟಿಸುವ ಮೊದಲು, ಕಾರಿನೊಳಗಿದ್ದ ಆರು ಉಗ್ರರು ಹೊರಗೆ ಬಂದು ಸೇನೆಯೊಂದಿಗೆ ತೀವ್ರ ಗುಂಡಿನ ಚಕಮಕಿಯಲ್ಲಿ ತೊಡಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಆರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

Must Read