Tuesday, October 7, 2025

ಗಾಂಧಿಜಯಂತಿ: ರಾಜ್‌ಘಾಟ್‌ ನಲ್ಲಿ ಪ್ರಧಾನಿಯಿಂದ ಮಹಾತ್ಮ ಗಾಂಧೀಜಿಗೆ ಗೌರವ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 156ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್‌ಘಾಟ್‌ಗೆ ತೆರಳಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಇಂದು ಆಗಿದ್ದು, ವಿಜಯ್ ಘಾಟ್‌ನಲ್ಲಿ ಶಾಸ್ತ್ರಿ ಅವರಿಗೆ ಕೂಡ ಗೌರವ ಸಲ್ಲಿಸಿದರು.

ಗಾಂಧಿ ಜಯಂತಿಯ ಅಂಗವಾಗಿ ಎಕ್ಸ್‌ನಲ್ಲಿ ತಮ್ಮ ಭಾವನೆ ಹಂಚಿಕೊಂಡ ಪ್ರಧಾನಿ ಮೋದಿ, “ಗಾಂಧೀಜಿ ಅವರ ಜೀವನ ಮತ್ತು ಆದರ್ಶಗಳು ಮಾನವ ಇತಿಹಾಸದ ದಾರಿಗೆ ದೀಪದಂತೆ ಬೆಳಕು ತೋರಿದವು. ಧೈರ್ಯ ಮತ್ತು ಸರಳತೆಯ ಮೂಲಕ ದೊಡ್ಡ ಬದಲಾವಣೆಯ ಸಾಧನೆ ಸಾಧ್ಯವೆಂದು ಬಾಪು ಸಾಬೀತುಪಡಿಸಿದರು” ಎಂದು ಹೇಳಿದರು. ಸೇವೆ ಮತ್ತು ಕರುಣೆ ಜನರನ್ನು ಸಬಲೀಕರಣಗೊಳಿಸುವ ನಿಜವಾದ ಸಾಧನವೆಂದು ಗಾಂಧೀಜಿ ನಂಬಿದ್ದನ್ನು ನೆನಪಿಸಿಕೊಂಡ ಅವರು, ವಿಕಸಿತ ಭಾರತವನ್ನು ಕಟ್ಟುವ ದಾರಿಯಲ್ಲಿ ಗಾಂಧೀಜಿ ತೋರಿದ ಮಾರ್ಗವೇ ನಮ್ಮ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.

https://twitter.com/narendramodi/status/1973558576095306214?ref_src=twsrc%5Etfw%7Ctwcamp%5Etweetembed%7Ctwterm%5E1973558576095306214%7Ctwgr%5E060742e7e3e45e917968c74eb51e04e7d53223c0%7Ctwcon%5Es1_c10&ref_url=https%3A%2F%2Fpublictv.in%2Fpm-narendra-modi-pays-tribute-to-mahatma-gandhi-at-raj-ghat%2F

ಇದೇ ದಿನ ಜನ್ಮದಿನ ಆಚರಿಸಲಾಗುತ್ತಿರುವ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಶಾಸ್ತ್ರಿ ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸಂಕಷ್ಟದ ಸಂದರ್ಭದಲ್ಲೂ ಭಾರತವನ್ನು ಬಲಪಡಿಸಿತು. ಅವರ ನಾಯಕತ್ವ ಮತ್ತು ನಿರ್ಧಾರಾತ್ಮಕ ಕ್ರಿಯೆಗಳು ದೇಶಕ್ಕೆ ಶಕ್ತಿ ನೀಡಿದವು. ‘ಜೈ ಜವಾನ್ ಜೈ ಕಿಸಾನ್’ ಎಂಬ ಅವರ ಘೋಷಣೆ ಜನಮನದಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿಸಿತು” ಎಂದು ಹೇಳಿದ್ದಾರೆ.