Wednesday, October 8, 2025

ಇ-ಖಾತಾ‌ ನೀಡಲು ಹಣದ ಬೇಡಿಕೆ: ಲೋಕಾ ಬಲೆಗೆ ಯಾದಗಿರಿ ನಗರಸಭೆ ಬಿಲ್ ಕಲೆಕ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕಿ‌ ಇರುವ ಇ-ಖಾತಾ ದಾಖಲೆ ನೀಡಲು ಯಾದಗಿರಿ ನಗರಸಭೆ ಅಧಿಕಾರಿ ಹಣದ ಬೇಡಿಕೆ ಇಟ್ಟ ದೂರಿನಡಿ ಲೋಕಾ ಬಲೆಗೆ ಬಿಲ್ ಕಲೆಕ್ಟರ್ ಬಿದ್ದಿರುವ ಘಟನೆ ಯಾದಗಿರಿ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು 8000 ಹಣದ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 5000 ಹಣವನ್ನು ಪೋನ್ ಪೇ ಮೂಲಕ ತೆಗೆದುಕೊಂಡಿದ್ದಾನೆ. ಈ ಕುರಿತು ದೂರಾದಾರ ಶಶಿಕುಮಾರ ಜ್ಞಾನಮಿತ್ರ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.

ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಐಗಳಾದ ಸಂಗಮೇಶ, ಸಿದ್ದರಾಮ ಬಳೂರ್ಗಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದಾರೆ.

error: Content is protected !!