January19, 2026
Monday, January 19, 2026
spot_img

ಭಾರತ-ಚೀನಾ ವಿಮಾನಯಾನ ಸೇವೆ ಪುನರಾರಂಭ… ಸಂಬಂಧ ಸುಧಾರಣೆಯ ಸಂಕೇತ: ರಣಧೀರ್‌ ಜೈಸ್ವಾಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಚೀನಾ ನೇರ ವಿಮಾನಯಾನ ಸೇವೆ ಪುನರಾರಂಭ, ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಕಾಣುತ್ತಿರುವ ಸಂಕೇತ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌, ಭಾರತ-ಚೀನಾ ರಾಜತಾಂತ್ರಿಕ ಸಂಬಂಧಗಳು ಸುಧಾರಣೆಯ ಹಳಿ ಮೇಲೆ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ನಡುವೆ ನೇರ ವಿಮಾನಯಾನ ಸೇವೆ ಆರಂಭವಾಗಲಿದೆ. ಈ ಕುರಿತು ಎರಡೂ ಕಡೆಯ ವಿಮಾನಯಾನ ಅಧಿಕಾರಿಗಳು ಅಂತಿಮ ಒಪ್ಪಿಗೆಯನ್ನು ಸೂಚಿಸಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ರಣಧೀರ್‌ ಸ್ಪಷ್ಟಪಡಿಸಿದರು.

ಉಭಯ ದೇಶಗಳೂ ಅನೇಕ ವಿಷಯಗಳ ಮೇಲೆ ಸರ್ವಸಮ್ಮತವಾದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು, ಈ ಬೆಳವಣಿಗೆಯನ್ನು ನಾವು ಈ ಸಮಯದ ಅಗತ್ಯ ಎಂದು ನಾವು ಕರೆಯಬಹುದು ಎಂದು ರಣಧೀರ್‌ ಜೈಸ್ವಾಲ್‌ ಸೂಚ್ಯವಾಗಿ ಹೇಳಿದ್ದಾರೆ.

ಭಾರತ ಮತ್ತು ಚೀನಾ ಅಕ್ಟೋಬರ್ ಅಂತ್ಯದ ವೇಳೆಗೆ ನೇರ ವಿಮಾನಯಾನಗಳನ್ನು ಪುನರಾರಂಭಿಸಲಿವೆ. ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು, ವಾಯು ಸೇವೆಗಳನ್ನು ಪುನರಾರಂಭಿಸುವ ಮತ್ತು ಪರಿಷ್ಕೃತ ವಾಯು ಸೇವೆಗಳ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಚರ್ಚೆಗಳಲ್ಲಿ ತೊಡಗಿದ್ದಾರೆ.

Must Read

error: Content is protected !!