Friday, October 10, 2025

India A vs Australia A: ತಿಲಕ್ ವರ್ಮಾ ಅಬ್ಬರಿಸಿದರೂ ಭಾರತ ತಂಡಕ್ಕೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾನ್ಪುರ್‌ನಲ್ಲಿ ನಡೆದ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ 2ನೇ ಏಕದಿನ ಪಂದ್ಯದಲ್ಲಿ, ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಭಾರತ ಎ ತಂಡಕ್ಕೆ ನಿರೀಕ್ಷಿತ ಜಯ ಸಿಕ್ಕಿಲ್ಲ. ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ಎ ಭರ್ಜರಿ ಗೆಲುವು ಸಾಧಿಸಿತು.

ಭಾರತ ಎ ಪರ ಟಾಸ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಒಪ್ಪಿಸಿದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಧೈರ್ಯದಿಂದ ಬ್ಯಾಟ್ ಮಾಡಿ ಇನಿಂಗ್ಸ್‌ಗೆ ಸ್ಥಿರತೆ ನೀಡಿದರು. 94 ರನ್‌ಗಳ ಅಬ್ಬರದ ಆಟವಾಡಿದ ತಿಲಕ್, ಶತಕದ ಅಂಚಿನಲ್ಲಿ ಔಟಾದರೂ, ತಂಡವನ್ನು 246 ರನ್‌ಗಳವರೆಗೆ ಕೊಂಡೊಯ್ದರು. ರಿಯಾನ್ ಪರಾಗ್ ಕೂಡ 58 ರನ್‌ಗಳೊಂದಿಗೆ ತಂಡಕ್ಕೆ ಬೆಂಬಲ ನೀಡಿದರು.

ಆದರೆ ಭಾರತ ಎ ಇನಿಂಗ್ಸ್ ಅಂತ್ಯದ ಬಳಿಕ ಮಳೆ ಬಂದು ಪಂದ್ಯವನ್ನು ಕೆಲಕಾಲ ನಿಲ್ಲಿಸಿತು. ನಂತರ ಗುರಿಯನ್ನು ಕಡಿತಗೊಳಿಸಿ ಆಸ್ಟ್ರೇಲಿಯಾ ಎ ತಂಡಕ್ಕೆ 25 ಓವರ್‌ಗಳಲ್ಲಿ 160 ರನ್‌ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಎ ಪರ ಮೆಕೆಂಝಿ ಹಾರ್ವೆ ಅಜೇಯ 70 ಹಾಗೂ ಕೂಪರ್ ಕೊನೊಲಿ ಅಜೇಯ 50 ರನ್ ಬಾರಿಸಿ ಕೇವಲ 16.4 ಓವರ್‌ಗಳಲ್ಲಿ ಗುರಿ ತಲುಪಿಸಿದರು.

error: Content is protected !!