Sunday, October 12, 2025

ಮುರುಡೇಶ್ವರಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ

ಹೊಸದಿಗಂತ ವರದಿ, ಭಟ್ಕಳ:

ಮುರುಡೇಶ್ವರಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ ನಾಲ್ವರು ಪ್ರವಾಸಿಗರನ್ನು ಜೀವ ರಕ್ಷಕ ದಳ, ಕರಾವಳಿ ಕಾವಲು ಪಡೆ, ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶನಿವಾರ ಸಂಭವಿಸಿದೆ.

ಪ್ರವಾಸಕ್ಕೆಂದು ಬೆಂಗಳೂರಿನಿoದ ಮುರುಡೇಶ್ವರಕ್ಕೆ ಬಂದಿದ್ದ ನಾಲ್ವರು ಯುವಕರು ಸಮುದ್ರದಲ್ಲಿ ಈಜುತ್ತಾ ದಡದಿಂದ ಸ್ವಲ್ಪ ದೂರಕ್ಕೆ ಹೋಗಿದ್ದರು. ಅಲೆಗಳ ಅಬ್ಬರಕ್ಕೆ ಈಜಲು ಸಾಧ್ಯವಾಗದೇ ಮುಳುಗುತ್ತಿರುವುದನು ಕಂಡು ಜೀವರಕ್ಷಕ ದಳದ ರಾಜೇಶ್, ಮುದಾಸಿರ್, ಸಂತೋಷ, ಕರಾವಳಿ ಕಾವಲು ಪಡೆಯ ದರ್ಶನ, ಕರಾವಳಿ ನಿಯಂತ್ರಣ ದಳದ ನಾಗರಾಜ್, ಹೋಮ್ ಗಾರ್ಡ್ ಸುಧಾಕರ ಹಾಗೂ ಸ್ಥಳೀಯ ಯುವಕರು ನೀರಿಗೆ ಧುಮುಕಿ ಹೋರಾಟ ನಡೆಸಿ ನಾಲ್ವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.ಕ್ಕೆ ಇಳಿದು ಅಬ್ಬರದ ಅಲೆಗಳ ನಡುವೆಯೇ ಯುವಕರನ್ನು ರಕ್ಷಣೆ ಮಾಡಲು ಯಶಸ್ವೀಯಾಗಿದ್ದಾರೆ.

ರಕ್ಷಣೆಗೊಳಗಾದವರನ್ನು ಬೆಂಗಳೂರಿನ ವೇಣು (೧೯), ವಿನಯ ರಮೇಶ್ ಹಾಗೂ ಅವರಿಬ್ಬರು ಸ್ನೇಹಿತರು ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮುರುಡೇಶ್ವರ ಠಾಣಾ ಪಿಎಸೈ ಹಣಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!