Sunday, October 12, 2025

India vs Pakistan: ಹೈವೋಲ್ಟೇಜ್ ಕಾಳಗಕ್ಕೆ ವೇದಿಕೆ ಸಜ್ಜು, ಪಂದ್ಯಕ್ಕೂ ಮುನ್ನ BCCI ಖಡಕ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಶ್ರೇಷ್ಠ ಆರಂಭ ಪಡೆದಿದೆ. ಸೆಪ್ಟೆಂಬರ್ 30ರಂದು ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 59 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಇದೀಗ ತನ್ನ ಎರಡನೇ ಕದನಕ್ಕೆ ಸಜ್ಜಾಗಿದೆ. ಭಾನುವಾರ (ಅಕ್ಟೋಬರ್ 5) ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕಾಳಗಕ್ಕೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನ ಬಿಸಿಸಿಐ ಸ್ಪಷ್ಟ ನಿರ್ದೇಶನವೊಂದನ್ನು ನೀಡಿದೆ ಎಂಬ ವರದಿ ಹೊರಬಿದ್ದಿದೆ. ಪಾಕಿಸ್ತಾನ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಭಾರತೀಯ ಆಟಗಾರ್ತಿಯರಿಗೆ ಸೂಚನೆ ನೀಡಲಾಗಿದೆ. ಟಾಸ್ ಸಮಯದಲ್ಲಾಗಲಿ ಅಥವಾ ಪಂದ್ಯದ ನಂತರವಾಗಲಿ ಹಸ್ತಲಾಘನ ಮಾಡಬಾರದು ಎಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಮುಕ್ತಾಯವಾದ ಪುರುಷರ ಟಿ20 ಏಷ್ಯಾಕಪ್‌ನಲ್ಲಿ ಕೂಡ ಭಾರತೀಯ ಆಟಗಾರರು ಪಾಕಿಸ್ತಾನ ಕ್ರಿಕೆಟಿಗರೊಂದಿಗೆ ಶೇಕ್‌ಹ್ಯಾಂಡ್ ಮಾಡಿರಲಿಲ್ಲ. ಇದೀಗ ಮಹಿಳಾ ತಂಡಕ್ಕೂ ಅದೇ ನಿಯಮ ಅನ್ವಯವಾಗಿದೆ.

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಕಳೆದ ಎರಡು ದಶಕಗಳಲ್ಲಿ 11 ಬಾರಿ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ವಿಶೇಷವೆಂದರೆ, ಪ್ರತೀ ಬಾರಿ ಭಾರತವೇ ಗೆಲುವು ಸಾಧಿಸಿದೆ. ಇದರಿಂದಾಗಿ, ಈ ಬಾರಿ ನಡೆಯುತ್ತಿರುವ ಕಾಳಗವು 12ನೇ ಎದುರುಗೊಳ್ಳುವ ಅವಕಾಶವಾಗಿದ್ದು, ಅಂಕಿ-ಅಂಶಗಳ ಪ್ರಕಾರ ಮತ್ತೆ ಭಾರತ ಹಾದಿ ಸುಗಮವಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

error: Content is protected !!