Sunday, October 12, 2025

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಚಾಕು ಇರಿತ: ಏಳು ಮಂದಿ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾರ್ಖಂಡ್​​ನಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಕ್ರಧರಪುರದ ಹರಿಜನ ಬಸ್ತಿ ಪ್ರದೇಶದ ಯುವಕರ ಗುಂಪೊಂದು ತಮ್ಮ ದುರ್ಗಾ ಪೂಜಾ ಮಂಟಪದ ಮೂರ್ತಿಯನ್ನು ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಹಿಂತಿರುಗುತ್ತಿದ್ದಾಗ, 15 ಜನರ ಗುಂಪೊಂದು ಮೆರವಣಿಗೆಯೊಳಗೆ ನುಗ್ಗಿ ಚೂರಿಯಿಂದ ಇರಿದ ಘಟನೆ ನಡೆದಿದೆ.

ದಾಳಿಕೋರರು ಯುವಕರ ದೇಹದ ವಿವಿಧ ಭಾಗಗಳಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಚಕ್ರಧರಪುರ ಪೊಲೀಸ್ ಠಾಣೆಯಿಂದ ಕೆಲವೇ ಕೆಲವು ಮೀಟರ್ ದೂರದಲ್ಲಿ ನಡೆದ ಚಾಕು ದಾಳಿಯಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಯುವಕರು ಮೂರ್ತಿಯನ್ನು ವಿಸರ್ಜಿಸಿ ಹಿಂತಿರುಗುತ್ತಿದ್ದಾಗ ದಾಳಿಕೋರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನಸಮೂಹ ಭಯಭೀತರಾಗಿ ಚದುರಿಹೋಗುತ್ತಿದ್ದಂತೆ ಹಲ್ಲೆಕೋರರು ತಕ್ಷಣ ಓಡಿಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಗೊಂಡವರನ್ನು ಧ್ರುವ ಮುಖಿ, ಗೋವಿಂದ ಮುಖಿ, ದಿನೇಶ್ ಮುಖಿ, ರಿಕ್ಕಿ ಮುಖಿ, ಅತುಲ್ ಮುಖಿ, ಅಮನ್ ಮುಖಿ ಮತ್ತು ಅಜಯ್ ಮುಖಿ ಎಂದು ಗುರುತಿಸಲಾಗಿದೆ. ರಿಕ್ಕಿ ಮುಖಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಗೊಂಡವರೆಲ್ಲರೂ ಚಕ್ರಧರಪುರ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!