ಎಲ್ಲರೂ ಸುಂದರ, ಕೋಮಲ ತ್ವಚೆಯನ್ನು ಬಯಸುತ್ತಾರೆ. ಆದರೆ ದುಬಾರಿ ಕಾಸ್ಮೆಟಿಕ್ ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಸಹ ಚರ್ಮದ ಆರೈಕೆ ಸಾಧ್ಯ ಅನ್ನೋದು ನಿಮಗೆ ಗೊತ್ತಿದ್ಯಾ. ಪ್ರಾಕೃತಿಕ ವಿಧಾನಗಳಲ್ಲಿ, ನಿಂಬೆ ನೀರಿನಲ್ಲಿ ಪುದೀನಾ ಎಲೆಗಳನ್ನು ಬೆರೆಸಿ ಸೇವಿಸುವುದು ಹಾಗೂ ಮುಖಕ್ಕೆ ಹಚ್ಚುವುದು ಚರ್ಮದ ಆರೋಗ್ಯವನ್ನು ಒಳಗಿನಿಂದ ಸುಧಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ತಿಳಿದು ಬಂದಿದೆ.
- ಆಹಾರದಲ್ಲಿ ಬದಲಾವಣೆ: ಹೊರಗಿನಿಂದ ತ್ವಚೆ ಆರೈಕೆ ಮಾಡಿದರೂ, ಆಹಾರದಲ್ಲಿ ಪೋಷಕಾಂಶ ಸಮೃದ್ಧ ಆಹಾರ ಸೇವನೆ ಅಗತ್ಯ. ನಿಂಬೆ ಮತ್ತು ಪುದೀನಾ ಒಟ್ಟಿಗೆ ಸೇವಿಸುವುದರಿಂದ ಚರ್ಮದ ನೈಸರ್ಗಿಕ ಹೊಳಪು ಹೆಚ್ಚುತ್ತದೆ.
- ಹೈಡ್ರೇಷನ್: ನಿಂಬೆರಸ ಮತ್ತು ಪುದೀನ ಪಾನೀಯ ದೇಹಕ್ಕೆ ತಂಪು ನೀಡುತ್ತವೆ ಹಾಗೂ ಹೈಡ್ರೇಷನ್ ಸುಧಾರಿಸುತ್ತವೆ, ಇದು ಮಳೆಗಾಲದಲ್ಲಿ ಡ್ರೈಸ್ಕಿನ್ ಸಮಸ್ಯೆಗೆ ಸಹಾಯ ಮಾಡುತ್ತದೆ.
- ಪುದೀನದ ಗುಣ: ಪುದೀನ ಎಲೆಗಳಲ್ಲಿ ಉರಿಯೂತ ನಿವಾರಕ ಗುಣಗಳು ಮತ್ತು ಸ್ಯಾಲಿಸಿಲಿಕ್ ಆಮ್ಲವಿದ್ದು, ಚರ್ಮದ ಕಲೆ, ಉರಿಯೂತ ತೊಂದರೆ ಕಡಿಮೆ ಮಾಡುತ್ತದೆ.
- ನಿಂಬೆಹಣ್ಣು ಮತ್ತು ವಿಟಮಿನ್ C: ನಿಂಬೆ ಸಿಟ್ರಿಕ್ ಆಮ್ಲದಿಂದ ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಪ್ಪು ಚುಕ್ಕೆಗಳು, ಮೊಡವೆಗಳು ಕಡಿಮೆಯಾಗುತ್ತವೆ.
- ಫೇಸ್ ಮಾಸ್ಕ್ ರೂಪದಲ್ಲಿ ಬಳಕೆ: ನಿಂಬೆ ಮತ್ತು ಪುದೀನವನ್ನು ನೇರವಾಗಿ ಮುಖಕ್ಕೆ ಫೇಸ್ ಮಾಸ್ಕ್ ರೀತಿ ಹಚ್ಚಬಹುದು. ಇದರಿಂದ ಚರ್ಮಕ್ಕೆ ಕೋಮಲತೆ, ಕಾಂತಿ ಹಾಗೂ ಉತ್ತಮ ತ್ವಚೆ ಲಭ್ಯವಾಗುತ್ತದೆ.