Saturday, October 11, 2025

Tech Tips| ಫೋನ್ ಸಿಕ್ಕಾಪಟ್ಟೆ ಬಿಸಿಯಾಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ! ಇಲ್ಲಾಂದ್ರೆ ಬ್ಲಾಸ್ಟ್ ಆಗತ್ತೆ ನೋಡಿ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಬಳಕೆದಾರರು ತಮ್ಮ ಫೋನ್‌ಗಳನ್ನು ಹೆಚ್ಚು ಸಮಯ ಬಳಸುತ್ತಾರೆ. ಆದಾಗ್ಯೂ, ಫೋನ್ ಅತಿಯಾಗಿ ಬಿಸಿಯಾಗುವುದರಿಂದ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತೆ, ಸಾಧನದ ಕಾರ್ಯಕ್ಷಮತೆ ಕುಗ್ಗುವುದು ಮತ್ತು ಕೆಲವೊಮ್ಮೆ ಬೆಂಕಿ ಅಥವಾ ಸ್ಫೋಟದ ಅಪಾಯವೂ ಬರಬಹುದು. ಆದ್ದರಿಂದ, ಫೋನ್ ತಾಪಮಾನ ಹೆಚ್ಚಾದ ತಕ್ಷಣವೇ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.

ಫೋನ್ ಯಾವಾಗ ಬಿಸಿಯಾಗಬಹುದು?:
ವೀಡಿಯೊ ಕರೆ, ಗೇಮ್ ಆಡುವುದು ಅಥವಾ ಚಾರ್ಜಿಂಗ್ ಸಮಯದಲ್ಲಿ ಫೋನ್ ಹೆಚ್ಚು ಬಿಸಿಯಾಗುತ್ತದೆ. ಅಗ್ಗದ ಚಾರ್ಜರ್ ಅಥವಾ ದಪ್ಪ ಕೇಸ್ ಬಳಕೆ, ಸ್ಕ್ರೀನ್ ಬ್ರೈಟ್ ನೆಸ್ ಮತ್ತು ಬ್ಯಾಕ್ಗ್ರೌಂಡ್‌ನಲ್ಲಿ ಹಲವಾರು ಅಪ್ಲಿಕೇಶನ್ ಚಾಲನೆ ಸಹ ಶಾಖ ಹೆಚ್ಚಿಸಲು ಕಾರಣವಾಗಬಹುದು.

ಫೋನ್ ಬಿಸಿಯಾದಾಗ ಏನು ಮಾಡಬೇಕು:

  • ಫೋನ್ ಕವರ್ ತೆಗೆದುಹಾಕಿ: ಬಿಸಿಯಾದ ಫೋನ್‌ನ ದಪ್ಪ ಕವರ್ ತೆಗೆದು ಗಾಳಿಯಾಡುವ ಸ್ಥಳದಲ್ಲಿ ಇಟ್ಟರೆ ಶಾಖ ತಗ್ಗುತ್ತದೆ.
  • ಹೊಳಪನ್ನು ಕಡಿಮೆ ಮಾಡಿ, ಕಡಿಮೆ ಪವರ್ ಮೋಡ್ ಆನ್ ಮಾಡಿ: ಸ್ಕ್ರೀನ್ ಬ್ರೈಟ್ ನೆಸ್ ಕಡಿಮೆ ಮಾಡುವುದು ಮತ್ತು ಲೋ ಪವರ್ ಮೋಡ್ ಸಕ್ರಿಯಗೊಳಿಸುವುದು ಶಾಖ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
  • ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಮುಚ್ಚಿ: ಐಫೋನ್ ಅಥವಾ ಆಂಡ್ರಾಯ್ಡ್‌ನಲ್ಲಿ ಬೇಕಾಗದ ಅಪ್ಲಿಕೇಶನ್‌ಗಳನ್ನು ಮುಚ್ಚುವುದರಿಂದ ಪ್ರೊಸೆಸರ್ ಒತ್ತಡ ಕಡಿಮೆಯಾಗುತ್ತದೆ.
  • ಫೋನ್ ಆಫ್ ಮಾಡಿ: ಫೋನ್ ಹೆಚ್ಚು ಬಿಸಿಯಾದರೆ ಅದನ್ನು ಕೆಲ ನಿಮಿಷಗಳ ಕಾಲ ಆಫ್ ಮಾಡಿ ತಂಪಾಗಲು ಬಿಡುವುದು ಅತ್ಯುತ್ತಮ.
error: Content is protected !!