Sunday, October 12, 2025

ಸಿಜೆಐ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ದಾಳಿ: ಕೃತ್ಯಕ್ಕೆ ಪ್ರಧಾನಿ ಮೋದಿ ಖಂಡನೆ, ಸಂಯಮಕ್ಕೆ ಶ್ಲಾಘನೆ



ಹೊಸದಿಗಂತ ಡಿಜಿಟಲ್ ಡೆಸ್ಕ್:


ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ.


ಇದೇ ಸಂದರ್ಭ ಸಿಜೆಐ ಅವರ ಸಂಯಮವನ್ನು ಶ್ಲಾಘಿಸಿರುವ ಅವರು, ನ್ಯಾಯ ಮತ್ತು ಸಂವಿಧಾನದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.


ಇಷ್ಟಕ್ಕೂ ಇಂದು ಆಗಿದ್ದೇನು?
ಇಂದು ಸಿಜೆಐ ಬಿ.ಆರ್‌. ಗವಾಯಿ ನೇತೃತ್ವದ ನ್ಯಾಯಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭ ವಕೀಲ ಕಿಶೋರ್ ರಾಕೇಶ್‌ ಎಂಬವರು ನ್ಯಾಯಪೀಠದ ಸಮೀಪಕ್ಕೆ ಬಂದು ‘ಸನಾತನ ಕಾ ಅಪಮಾನ್ ನಹೀ ಸಹೇಂಗೆ’ ಎಂದು ಹಿಂದಿಯಲ್ಲಿ ಕೂಗುತ್ತಾ ಶೂ ಕಳಚಿ ನ್ಯಾಯಮೂರ್ತಿಗಳತ್ತ ಎಸೆಯಲು ಮುಂದಾದರು. ಈ ಸಂದರ್ಭ ಭದ್ರತಾ ಸಿಬ್ಬಂದಿ ತಕ್ಷಣವೇ ಅವರನ್ನು ತಡೆದು, ಕೋರ್ಟ್ ಹಾಲ್‌ನಿಂದ ಹೊರಕ್ಕೆ ಎಳೆದೊಯ್ದರು.


ಆಘಾತಕಾರಿಯಾಗಿದ್ದ ಈ ಅನಿರೀಕ್ಷಿತ ಘಟನೆಯಿಂದ ಸಿಜೆಐ ಗವಾಯಿ ಅವರು ಮಾತ್ರ ಸ್ವಲ್ಪವೂ ವಿಚಲಿತರಾಗಲಿಲ್ಲ. ಇಂತಹ ವಿಚಾರಗಳಿಂದ ನಿಮ್ಮ ಗಮನ ಬೇರೆಡೆಗೆ ಹೋಗದಂತೆ ನೋಡಿಕೊಳ್ಳಿ. ನಾವು ವಿಚಲಿತರಾಗಿಲ್ಲ. ಇದೆಲ್ಲವೂ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಂದು ಹೇಳಿದ ಅವರು ನ್ಯಾಯಾಲಯದ ಕಲಾಪವನ್ನು ಮುಂದುವರಿಸಿದರು.

error: Content is protected !!