January22, 2026
Thursday, January 22, 2026
spot_img

ಪಾಕ್ ಜಾಫರ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಭೀಕರ ದಾಳಿ: ಹೊಣೆ ಹೊತ್ತ ಬಲೂಚ್ ರಿಪಬ್ಲಿಕ್ ಗಾರ್ಡ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಮತ್ತೊಮ್ಮೆ ಭೀಕರ ಸ್ಫೋಟ ಸಂಭವಿಸಿದೆ.

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಸಮೀಪದ ಸುಲ್ತಾನ್ ಕೋಟ್ ಪ್ರದೇಶದಲ್ಲಿ ಇಂದು ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹಳಿಗಳ ಮೇಲೆ ಅಳವಡಿಸಲಾಗಿದ್ದ ಸ್ಫೋಟಕ ಸಾಧನ ಸ್ಫೋಟಿಸಿ, ರೈಲಿನ ಮೇಲೆ ದಾಳಿ ಮಾಡಲಾಗಿದೆ. ಇದರಿಂದ ರೈಲಿನ ಹಲವು ಬೋಗಿಗಳು ಹಳಿತಪ್ಪಿ ದೊಡ್ಡ ದುರಂತ ಸಂಭವಿಸಿದೆ.

ಬಲೂಚ್ ಬಂಡುಕೋರ ಗುಂಪು ಬಲೂಚ್ ರಿಪಬ್ಲಿಕ್ ಗಾರ್ಡ್ಸ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಪಾಕಿಸ್ತಾನಿ ಸೇನೆಯ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಗುರಿಯಾಗಿಸಲಾಗಿತ್ತು.

ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ, ಸದ್ಯ ಯಾವುದೇ ಸಾವಿನ ವರದಿಗಳು ಇನ್ನೂ ಬಂದಿಲ್ಲ.

ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದೆ. ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Must Read