Sunday, October 12, 2025

ಮನೆಯಲ್ಲಿದ್ದ ಬಾಯ್ಲರ್ ಸ್ಫೋಟ: ಬಾಲಕಿ ಸಾವು, ಮೂವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಲ್ಲಿದ್ದ ಬಾಯ್ಲರ್ ಸ್ಫೋಟಗೊಂಡು 11 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಳಿ ನಡೆದಿದೆ.

ಬಾಯ್ಲರ್ ಪಕ್ಕದಲ್ಲೇ ಇದ್ದ ಸ್ವೀಕೃತಿ ಮೃತ ಬಾಲಕಿ.

ಬೆಳಗ್ಗೆ ಬಾಯ್ಲರ್ ಆನ್ ಮಾಡಿದಾಗ ಸ್ಟೋಟಗೊಂಡಿದೆ. ಈ ವೇಳೆ ಬಾಯ್ಲರ್ ಪಕ್ಕದಲ್ಲೇ ಬಾಲಕಿ ಸ್ವೀಕೃತಿ ಇದ್ದಳು. ಹೀಗಾಗಿ ಸ್ಟೋಟದ ತೀವ್ರತೆಗೆ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತೀರ್ಥಿ ಬಾಯಿ, ಹೂವಾ ನಾಯ್ಕ್ ಮತ್ತು ಸುನೀತಾ ಬಾಯಿಗೆ ಗಂಭೀರ ಗಾಯಗಳಾಗಿದ್ದು, ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!