ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯ ಪರವಾಗಿ 515 ಸೇನಾ ನೆಲೆ ಕಾರ್ಯಾಗಾರ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಗಳ ಮಹಾನಿರ್ದೇಶಕರು ಮತ್ತು ಇಂಡಿ ಅಸ್ತ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಭಾರತೀಯ ಸೇನಾ ಭೂ ವ್ಯವಸ್ಥೆಗಳಿಗಾಗಿ ಕೃತಕ ಬುದ್ಧಿಮತ್ತೆ ಆಧರಿಸಿದ ಡ್ರೋನ್ ಸಾಮರ್ಥ್ಯಗಳನ್ನು ವೇಗಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಕೃತಕ ಬುದ್ಧಿಮತ್ತೆ ಆಧರಿಸಿದ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಮತ್ತು ಸ್ಟ್ಯಾಂಡರ್ಡ್ ಡ್ರೋನ್ ಆಪರೇಟಿಂಗ್ ಪ್ಲಾಟ್‌ಫಾರ್ಮ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ ಡ್ರೋನ್ ತಯಾರಿಕೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಸಕ್ರಿಯಗೊಳಿಸುವುದು ಒಪ್ಪಂದದ ಉದ್ದೇಶವಾಗಿದೆ. ಈ ಒಪ್ಪಂದವು ಸ್ಥಳೀಯ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ನಿರ್ಣಾಯಕ ಮಾನವರಹಿತ ವ್ಯವಸ್ಥೆಗಳಿಗೆ ಆಮದು ಅವಲಂಬನೆಯನ್ನು ತಗ್ಗಿಸುತ್ತದೆ. ಇದು ಸೇನಾ ಕಾರ್ಯಾಚರಣೆಗಳನ್ನು ಬೆಂಬಲಿಸುವ ಕೃತಕ ಬುದ್ಧಿಮತ್ತೆ ಆಧರಿಸಿದ ಡ್ರೋನ್ ಪರಿಹಾರಗಳಿಗಾಗಿ ಕಡಿಮೆ ಸಮಯದಲ್ಲಿ ಒದಗಿಸಲಿದೆ.