ಮೇಷ
ಸಮಸ್ಯೆಯೊಂದು ಪರಿಹಾರವಾಯಿತು ಎಂಬ ನಿರಾಳತೆ ಉಂಟಾದರೂ ಹೊಸ ಸಮಸ್ಯೆ ತಲೆದೋರ ಬಹುದು. ಸಹನೆಯಿಂದ ನಿಭಾಯಿಸಿ.
ವೃಷಭ
ನಿಮ್ಮ ಪ್ರಯತ್ನ ವಿ-ಲವಾದರೆ ಹತಾಶೆ ಬೇಡ. ಮರಳಿ ಯತ್ನವ ಮಾಡಿ. ಹಳೆಯ ನೆನಪಿನಲ್ಲೆ ಕೊರಗುತ್ತಾ ಕೂರಬೇಡಿ.
ಮಿಥುನ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಶಾಂತವಾಗಿ ನಿಭಾಯಿಸಿ. ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲ ಅವಶ್ಯ. ಸಣ್ಣಪುಟ್ಟ ವಿಷಯಕ್ಕೆ ರೇಗದಿರಿ.
ಕಟಕ
ವೃತ್ತಿಯಲ್ಲಿ ಹೊಸ ಸವಾಲು. ಸಮರ್ಥವಾಗಿ ನಿಭಾಯಿಸಲು ಕಷ್ಟ. ನಿಧಾನಗತಿ ಒಳಿತು. ಮನೆಯ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾದೀತು.
ಸಿಂಹ
ಬಿಡುವಿಲ್ಲದ ಕೆಲಸದ ಮಧ್ಯೆಯೂ ಕುಟುಂಬದ ಹಿತಾಸಕ್ತಿ ಮರೆಯದಿರಿ. ಶಾಂತ ಮನಸ್ಥಿತಿಯಿಂದ ಪರಿಸ್ಥಿತಿ ನಿಭಾಯಿಸಿ. ಹಣಕ್ಕೆ ಸಂಬಂಽಸಿ ಚಿಂತೆ.
ಕನ್ಯಾ
ಮಾತು ಮನೆ ಕೆಡಿಸಬಹುದು ಎಂಬ ಮಾತನ್ನು ಮರೆಯಬೇಡಿ. ಎಲ್ಲರ ಜತೆ ಹಿತಮಿತ ಮಾತನಾಡಿ. ಖರ್ಚು ಹೆಚ್ಚಳದಿಂದ ಚಿಂತೆ.
ತುಲಾ
ಪರಿಹರಿಸಬಲ್ಲ ಸಮಸ್ಯೆಗೆ ವೃಥಾ ಚಿಂತೆ ಮಾಡುವಿರಿ. ಪರಿಹರಿಸಲು ಪ್ರಯತ್ನವೇ ನಡೆಸದಿದ್ದರೆ ಹೇಗೆ? ಪ್ರಯತ್ನಕ್ಕೆ ತಕ್ಕ -ಲವಿದೆ ತಿಳಿಯಿರಿ.
ವೃಶ್ಚಿಕ
ವ್ಯಕ್ತಿಗತ ಕಲಹ ಸಂಭವ. ಅನುಚಿತ ಮಾತು ಅದಕ್ಕೆ ಕಾರಣವಾದೀತು. ಹಾಗಾಗಿ ಮಾತಿನಲ್ಲಿ ಎಚ್ಚರವಿರಲಿ. ಹಣದ ತಾಪತ್ರಯ ಕಾಡಬಹುದು.
ಧನು
ನಿಮ್ಮ ವ್ಯವಹಾರ ವಿಸ್ತರಿಸಲು ಬಯಸುವಿರಿ. ಸೂಕ್ತ ಯೋಜನೆ ರೂಪಿಸಿ. ಅವಸರದ ಕ್ರಮ ಹಾನಿ ತಂದೀತು. ಸಂಗಾತಿ ಜತೆಗೆ ಮುಚ್ಚುಮರೆ ಬೇಡ.
ಮಕರ
ದೊಡ್ಡ ಯೋಜನೆಗೆ ಕೈ ಹಾಕುವ ಮುನ್ನ ಎಲ್ಲವನ್ನು ಸರಿಯಾಗಿ ಪರಿಶೀಲಿಸಿ. ಹಿತಶತ್ರುಗಳ ಕುರಿತು ಎಚ್ಚರವಿರಲಿ. ಬೆನ್ನಹಿಂದೆ ಪಿತೂರಿಯಿದೆ.
ಕುಂಭ
ಆಪ್ತ ವ್ಯಕ್ತಿಯ ಮನೋಭಾವ ಪದೇಪದೇ ಬದಲಾದೀತು. ಅದರಿಂದ ನಿಮ್ಮ ಮನಶ್ಯಾಂತಿ ಕಲಕಬಹುದು. ದೃಢ ಮನಸ್ಸು ಪ್ರದರ್ಶಿಸಿ.
ಮೀನ
ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿರಲಿ. ಕಠಿಣ ಕಾರ್ಯವನ್ನೂ ನೀವು ಸಾಽಸಬಲ್ಲಿರಿ. ಆಪ್ತರ ಸಂಗದಲ್ಲಿ ನೆಮ್ಮದಿ ಪಡುವಿರಿ.
ದಿನಭವಿಷ್ಯ: ವಾಹನ ಖರೀದಿಗೆ ಉತ್ತಮ ಘಳಿಗೆ, ಕೃಷಿ ಚಟುವಟಿಕೆಯಲ್ಲಿ ಸೋಲಿನ ಭೀತಿ
