ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ರಾಜ್ಯದಲ್ಲಿ ನೈಋತ್ಯ ಮುಂಗಾರು ಬರೀ ಮಳೆಯಾಗಿರಲಿಲ್ಲ, ಅದೊಂದು ಅಬ್ಬರದ ಘರ್ಜನೆಯಾಗಿತ್ತು! ಕಳೆದ ವರ್ಷಕ್ಕಿಂತಲೂ ಹೆಚ್ಚು ಆರ್ಭಟಿಸಿದ್ದ ಮಳೆರಾಯ, ತನ್ನ ಗೈರುಹಾಜರಿಯ ಕೊರತೆಯನ್ನು ಈ ವರ್ಷ ತುಂಬಿಬಿಟ್ಟಿದ್ದ. ದಾಖಲೆಗಳ ಪ್ರಕಾರ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಮುಂಗಾರು ಅವಧಿ ಈಗ ಮುಕ್ತಾಯದ ಹಂತದಲ್ಲಿದೆ. ಆದರೆ, ಮಳೆ ಕಾಟದಿಂದ ಸದ್ಯಕ್ಕೆ ಮುಕ್ತಿ ಇಲ್ಲ!
ಇದೇ ವರ್ಷಾಂತ್ಯದವರೆಗೂ ಮಳೆಗಾಲ ಮುಂದುವರಿಯಲಿದೆ. ಮುಂಗಾರು ಮುಗಿಯುತ್ತಿದ್ದಂತೆಯೇ, ಹಿಂಗಾರು ಮಳೆಯ ಇನಿಂಗ್ಸ್ ಪ್ರಾರಂಭವಾಗಲಿದೆ.
ಹವಾಮಾನ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ;.
- ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
- ಒಟ್ಟು 339 ಸೆಂಟಿ ಮೀಟರ್ ಮಳೆಯಾಗಿದ್ದು, ಸರಾಸರಿಗಿಂತ 14 ಸೆಂಟಿ ಮೀಟರ್ ಹೆಚ್ಚಳವಾಗಿದೆ.
- ಮುಖ್ಯವಾಗಿ ಕರಾವಳಿ ತೀರ ಮತ್ತು ಉತ್ತರ ಒಳನಾಡಿನ ಪ್ರದೇಶಗಳು ಈ ಮಳೆರಾಯನ ಅಬ್ಬರಕ್ಕೆ ಸಾಕ್ಷಿಯಾಗಿದ್ದು, ಅನೇಕ ಕಡೆಗಳಲ್ಲಿ ನೆರೆ-ಅನಾಹುತಗಳು ಸಂಭವಿಸಿವೆ.
ಅಕ್ಟೋಬರ್‌ನಿಂದ ಡಿಸೆಂಬರ್: ಮತ್ತೊಂದು ಆರ್ಭಟದ ಮುನ್ಸೂಚನೆ!
ಹವಾಮಾನ ಇಲಾಖೆಯ ವಿಜ್ಞಾನಿಗಳು ನೀಡಿರುವ ಮುನ್ಸೂಚನೆಯು ಆತಂಕದ ಜೊತೆ ಕುತೂಹಲವನ್ನೂ ಹುಟ್ಟಿಸಿದೆ. ಮುಂಗಾರಿನಷ್ಟೇ, ಹಿಂಗಾರೂ ಈ ಬಾರಿ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಈ ಹಿಂಗಾರು ಮಳೆಯ ವಿಸ್ತರಣೆ ಇರಲಿದ್ದು, ಜನತೆ ತಮ್ಮ ಮಳೆಗಾಲದ ಸಿದ್ಧತೆಗಳನ್ನು ವರ್ಷಾಂತ್ಯದವರೆಗೂ ಒಗ್ಗಿಕೊಳ್ಳಲೇಬೇಕು.