Sunday, October 12, 2025

ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ನಾಹೋರ್ಕೈ ಮುಡಿಗೆ ಸಾಹಿತ್ಯ ನೊಬೆಲ್‌ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ನಾಹೋರ್ಕೈ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಲಾಗಿದೆ.

ತಮ್ಮ ತಾತ್ವಿಕ ಗದ್ಯಕ್ಕಾಗಿ ಪ್ರಸಿದ್ಧರಾದ ಕ್ರಾಸ್ನಾಹೋರ್ಕೈ, ಆಧುನಿಕ ಸಾಹಿತ್ಯವನ್ನು ಪುನರ್ರೂಪಿಸಿದ್ದಕ್ಕಾಗಿ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ವರ್ಷದ ಸಾಹಿತ್ಯ ನೊಬೆಲ್ ದಕ್ಷಿಣ ಕೊರಿಯಾದ ಕಾದಂಬರಿಕಾರ ಹಾನ್ ಕಾಂಗ್ ಅವರಿಗೆ ಸಂದಿತು.

“for his compelling and visionary oeuvre that, in the midst of apocalyptic terror, reaffirms the power of art” ಎಂಬ ಕೃತಿಗೆ ಈ ಪ್ರಶಸ್ತಿಯನ್ನು ನೀಡಿಲಾಗಿದೆ. ಈ ಕೃತಿಯ ಮೂಲಕ ಸಮಕಾಲೀನ ಜೀವನದ ಸಾರವನ್ನು ಜಗತ್ತಿಗೆ ತೋರಿಸಿದ ಹಾಗೂ ನಮ್ಮ ಕಾಲದ ಭಯೋತ್ಪಾದನೆ ಮತ್ತು ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ, ಮುಂದಿನ ಪೀಳಿಗೆಯ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಬಗ್ಗೆ ಈ ಕೃತ್ತಿಗಳಲ್ಲಿ ಈ ಸಮಾಜಕ್ಕೆ ತೋರಿಸಿದ್ದಾರೆ. ತಮ್ಮ ಕೃತಿಯ ಮೂಲಕ ನಿರೂಪಣಾ ಶೈಲಿ ಮತ್ತು ತಾತ್ವಿಕದ ಬಗ್ಗೆ ಆಳವಾದ ಪ್ರಭಾವವನ್ನು ಉಂಟು ಮಾಡಿದವರು, ಕ್ರಾಸ್ನಾಹೋರ್ಕೈ ಅವರ ಕೃತಿಗಳು ಆಧುನಿಕ ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಅವರ ಬರವಣಿಗೆಯು ಜಗತ್ತಿನಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನಿಂತಿದೆ.

error: Content is protected !!