ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋ ರಿಕ್ಷಾವನ್ನೇ ಒಂದು ಸಣ್ಣ ಚಲಿಸುವ ಉದ್ಯಾನವನವನ್ನಾಗಿ ಪರಿವರ್ತಿಸಿ, ದೇಶದ ಗಮನ ಸೆಳೆದಿದ್ದಾನೆ. ಆಟೋ ಅಂಜಿ ಎಂದು ಗುರುತಿಸಿಕೊಂಡಿರುವ ಈ ಚಾಲಕನ ವಿಶಿಷ್ಟ ಪರಿಸರ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈತನ ಗೋ ಗ್ರೀನ್ ಆಟೋ ವಿಡಿಯೋ ವೈರಲ್ ಆಗಿದೆ.
ಆಟೋದ ಸುತ್ತಲೂ ಮತ್ತು ಮುಂಭಾಗದಲ್ಲಿ ಹಸಿರು ಮ್ಯಾಟ್ (ಗ್ರೀನ್ ಮ್ಯಾಟ್) ಅಳವಡಿಸಲಾಗಿದೆ. ಆಟೋದ ಮೇಲ್ಭಾಗದಲ್ಲಿ ವಿಶೇಷವಾಗಿ ಸ್ಟ್ಯಾಂಡ್ ಮಾಡಿಸಿ, ಅದರಲ್ಲಿ ವಿವಿಧ ಬಗೆಯ ಹೂವಿನ ಗಿಡಗಳನ್ನು ಹಾಗೂ ಹುಲ್ಲಿನ ಜಾತಿಯ ಗಿಡಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಜೊತೆಗೆ, ಹಲವು ಗಿಡಿಗಳ ಪಾಟ್‌ಗಳನ್ನು ಸುತ್ತಲೂ ಅಳವಡಿಸಿದ್ದಾರೆ. ಒಟ್ಟಾರೆ ಆಟೋ ಮೇಲೆ ಸಣ್ಣದೊಂದು ‘ಕೈತೋಟ’ವನ್ನೇ ನಿರ್ಮಿಸಿದ್ದಾರೆ.
ಆಟೋದ ಮೇಲೆ ಗಿಡಗಳನ್ನು ಇಡುವುದಷ್ಟೇ ಅಲ್ಲ, ಅವುಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಆಟೋದ ಮೇಲ್ಭಾಗದಲ್ಲಿರುವ ಎಲ್ಲಾ ಗಿಡಗಳಿಗೆ ಅವರು ದಿನಕ್ಕೆ 3 ಬಾರಿ ತಪ್ಪದೆ ನೀರು ಹಾಕಿ ಪೋಷಿಸುತ್ತಾರೆ. ಆಟೋವನ್ನು ನಿರಂತರವಾಗಿ ಸ್ವಚ್ಛಗೊಳಿಸಿ, ಅದರ ಹಸಿರುತನ ಮತ್ತು ಅಂದವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಾರೆ. ಆಂಧ್ರ ಪ್ರದೇಶ ಮೂಲದವರಾದ ಅಂಜಿ ಅವರ ಈ ಪರಿಸರ ನಿಷ್ಠೆ ಜನರ ಮನ ಗೆದ್ದಿದೆ. ಆಟೋ ಹೇಗಿದೆ ನೋಡಿ..
VIRAL VIDEO | ಇದು ಬರೀ ಆಟೋ ಅಲ್ಲ, ಪುಟಾಣಿ ಲಾಲ್‌ಬಾಗ್!
