Saturday, October 11, 2025

Why So | ಉದ್ದಿನ ವಡೆಯ ಮಧ್ಯದಲ್ಲಿ ತೂತು ಇರೋದು ಯಾಕೆ? ಯಾವತ್ತಾದ್ರೂ ಯೋಚಿಸಿದ್ದೀರಾ?

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಉದ್ದಿನ ವಡೆ ಕೂಡ ಒಂದು. ಬೆಳಗಿನ ಉಪಹಾರವಾಗಲಿ ಅಥವಾ ಹಬ್ಬ-ಹರಿದಿನದ ವಿಶೇಷ ಖಾದ್ಯವಾಗಲಿ, ಉದ್ದಿನ ವಡೆ ಯಾವಾಗಲೂ ಪ್ಲೇಟ್‌ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆದರೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ ಉದ್ದಿನ ವಡೆಯಲ್ಲಿ ಮಧ್ಯದಲ್ಲಿ ಏಕೆ ತೂತು ಇರುತ್ತೆ ಅಂತ? ಅದು ಕೇವಲ ಆಕಾರಕ್ಕಾಗಿ ಅಲ್ಲ, ಅದರ ಹಿಂದೆ ಅಡುಗೆ ವಿಜ್ಞಾನದ ಒಂದು ಕುತೂಹಲಕಾರಿ ಅಂಶ ಅಡಗಿದೆ.

ಉದ್ದಿನ ವಡೆ ಸಾಮಾನ್ಯವಾಗಿ ದಪ್ಪವಾಗಿರುತ್ತದೆ. ಈ ವಡೆಯನ್ನು ಮಧ್ಯದಲ್ಲಿ ತೂತು ಮಾಡದೇ ಕರಿಯುವುದಾದರೆ, ಹೊರಭಾಗವು ಬೇಗನೆ ಕರಿಯುತ್ತದೆ ಆದರೆ ಒಳಗಿನ ಭಾಗ ಹಸಿಯಾಗಿಯೇ ಉಳಿಯುತ್ತದೆ. ಮಧ್ಯದಲ್ಲಿ ತೂತು ಇರುವುದು ಬಿಸಿ ಎಣ್ಣೆ ವಡಾದ ಒಳಭಾಗಕ್ಕೂ ಸುಲಭವಾಗಿ ತಲುಪಲು ಸಹಾಯ ಮಾಡುತ್ತದೆ. ಇದರಿಂದ ವಡಾ ಹೊರಗೂ ಒಳಗೂ ಸಮವಾಗಿ ಬೇಯುತ್ತದೆ ಮತ್ತು ಚಿನ್ನದ ಬಣ್ಣದಲ್ಲಿ ಗರಿಗರಿಯಾಗಿ ಸಿದ್ಧವಾಗುತ್ತದೆ.

ಈ ತಂತ್ರವನ್ನು ಕೇವಲ ವಡೆಯಲ್ಲೇ ಅಲ್ಲ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಡೋನಟ್ಸ್ ತಯಾರಿಸುವಾಗಲೂ ಬಳಸಲಾಗುತ್ತದೆ. ಮಧ್ಯದ ರಂಧ್ರದಿಂದ ಎಣ್ಣೆ ಸಮವಾಗಿ ಹರಡಿ, ವಡಾವನ್ನು ಪೂರ್ತಿಯಾಗಿ ಕರಿಯಲು ಸಹಾಯವಾಗುತ್ತದೆ. ಹೆಚ್ಚುವರಿ ಎಣ್ಣೆಯೂ ಸುಲಭವಾಗಿ ಹೊರಹೋಗುತ್ತದೆ, ಇದರಿಂದ ವಡಾ ಎಣ್ಣೆಯಿಂದ ತುಂಬೋದಿಲ್ಲ.

ಮತ್ತೊಂದು ಪ್ರಮುಖ ಅಂಶವೆಂದರೆ, ಮಧ್ಯದ ತೂತು ವಡೆಯ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ. ಮೇಲ್ಮೈ ವಿಸ್ತೀರ್ಣ ಹೆಚ್ಚಿದಂತೆ ಬಿಸಿ ಎಣ್ಣೆಯ ಸಂಪರ್ಕ ಹೆಚ್ಚು, ಅದರಿಂದ ವಡೆ ವೇಗವಾಗಿ ಮತ್ತು ಸಮವಾಗಿ ಬೇಯುತ್ತದೆ. ಈ ತಂತ್ರದಿಂದ ವಡೆ ಹೊರಗೆ ಕ್ರಿಸ್ಪಿ, ಒಳಗೆ ಮೃದುವಾಗಿಯೂ ಇರುತ್ತದೆ.

ಆದ್ದರಿಂದ, ಉದ್ದಿನ ವಡೆಯ ಮಧ್ಯದಲ್ಲಿರುವ ಈ ಸಣ್ಣ ತೂತು ಕೇವಲ ಆಕರ್ಷಕ ಆಕಾರಕ್ಕಾಗಿ ಅಲ್ಲ ಅದು ಅಡುಗೆ ವಿಜ್ಞಾನದ ಒಂದು ಚತುರ ವಿಧಾನ. ಈ ತೂತಿನ ಕಾರಣದಿಂದಲೇ ವಡೆ ತನ್ನ ವಿಶಿಷ್ಟ ರುಚಿ, ಬಣ್ಣ ಮತ್ತು ಪರ್ಫೆಕ್ಟ್‌ ಟೆಕ್ಸ್ಚರ್‌ ಅನ್ನು ಪಡೆಯುತ್ತದೆ.

error: Content is protected !!