Saturday, October 11, 2025

FOOD | ಕರುಮ್ ಕುರುಮ್ ರವೆ ಚಕ್ಕುಲಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ!

ಸಂಜೆಯ ಚಹಾ ಅಥವಾ ಕಾಫಿ ಜೊತೆಗೆ ಚಕ್ಕುಲಿ ಇದ್ದರೆ ಅದರ ರುಚಿ ಹೇಳತೀರದು. ಆದರೆ ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ ಚಕ್ಕುಲಿ ಒಂದು ವಾರದೊಳಗೆ ಮೆತ್ತಗಾಗುತ್ತೆ ಅಥವಾ ವಾಸನೆ ಬರುತ್ತೆ. ಆದರೆ ಇಲ್ಲಿದೆ ತಿಂಗಳಾದರೂ ಹಾಳಾಗದ, ಗರಿಗರಿಯಾಗಿಯೇ ಉಳಿಯುವ “ರವೆ ಚಕ್ಕುಲಿ” ಮಾಡುವ ಅತ್ಯಂತ ಸುಲಭ.

ಬೇಕಾಗುವ ಸಾಮಾಗ್ರಿಗಳು:

ಚಿರೋಟಿ ರವೆ – 1 ಕಪ್
ಹುರಿಗಡ್ಲೆ ಪುಡಿ – 1 ಕಪ್
ಅಕ್ಕಿಹಿಟ್ಟು – 3 ಕಪ್
ಬಿಳಿ ಎಳ್ಳು – 1 ಚಮಚ
ಜೀರಿಗೆ – 1 ಚಮಚ
ಕರಿಮೆಣಸಿನ ಪುಡಿ ಅಥವಾ ಖಾರದ ಪುಡಿ – ಅರ್ಧ ಚಮಚ
ಬೆಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ:

ಮೊದಲು ಒಂದು ಪ್ಯಾನ್‌ನಲ್ಲಿ ಸುಮಾರು ಎರಡೂವರೆ ಕಪ್ ನೀರು ಹಾಕಿ ಕುದಿಯಲು ಇಡಿ. ನೀರು ಕುದಿಯಲು ಶುರುವಾದಾಗ ಚಿರೋಟಿ ರವೆ ಸೇರಿಸಿ ತಿರುಗಿಸಿ, ಮುಚ್ಚಿ 2–3 ನಿಮಿಷ ಬೇಯಿಸಿ. ಬೆಂದ ನಂತರ ತಣ್ಣಗಾಗಲು ಬಿಡಿ.

ಒಂದು ದೊಡ್ಡ ಬೌಲ್‌ನಲ್ಲಿ ಹುರಿಗಡ್ಲೆ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಎಳ್ಳು, ಜೀರಿಗೆ, ಖಾರದ ಪುಡಿ ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ ಬೇಯಿಸಿದ ರವೆ ಸೇರಿಸಿ, ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಹೀಗೆ ಸಿದ್ಧವಾದ ಹಿಟ್ಟನ್ನು ಸ್ವಲ್ಪ ಎಣ್ಣೆ ಸವರಿ ನಾದಿ, ಚಕ್ಕುಲಿ ಪ್ರೆಸ್‌ಗೆ ತುಂಬಿ ಚಕ್ಕುಲಿಗಳನ್ನು ಒತ್ತಿ ಇಡಿ.

ಮಧ್ಯಮ ಉರಿಯಲ್ಲಿರುವ ಎಣ್ಣೆಯಲ್ಲಿ ಚಕ್ಕುಲಿಗಳನ್ನು ಕರಿಯಿರಿ. ಎರಡು ಬದಿಯೂ ಹೊಂಬಣ್ಣ ಬರುವವರೆಗೆ ಬೇಯಿಸಿ. ತಣ್ಣಗಾದ ನಂತರ ಏರ್‌ಟೈಟ್ ಬಾಕ್ಸ್‌ನಲ್ಲಿ ಇಟ್ಟುಕೊಳ್ಳಿ.

error: Content is protected !!