Saturday, October 11, 2025

ಕಾಲು ಜಾರಿ ಬಿದ್ದ ಹಿರಿಯ ನಟ ಉಮೇಶ್: ಆಸ್ಪತ್ರೆಗೆ ದಾಖಲು , ಆರೋಗ್ಯ ಸ್ಥಿತಿ ಹೇಗಿದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಹಿರಿಯ ನಟ ಉಮೇಶ್ ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಜಾರಿ ಬಿದ್ದ ಉಮೇಶ್ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಮುದ್ದಿನಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದೀಗ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ಮನೆಯಲ್ಲಿ ಸ್ನಾನದ ರೂಂ ನಲ್ಲಿ ಕಾಲು ಜಾರಿ ತಪ್ಪಿ ಬಿದ್ದಿದ್ದರು. ಆ ಬಳಿಕ ಅವರ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟ ಮತ್ತು ಕಾಲಿಗೆ ಗಂಭೀರವಾಗಿ ಪೆಟ್ಟಾಗಿದ್ದು, ಸಂತ ಹಾಗೂ ಕಾಲಿಗೆ ಸರ್ಜರಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

error: Content is protected !!