ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ನಿಂದಿಸಿದ ಆರೋಪದ ಮೇಲೆ ಮಲಯಾಳಂ ನಟ ಜಯಕೃಷ್ಣನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲು ಮಾಡಲಾಗಿತ್ತು. ಇದೀಗ ಉರ್ವ ಪೊಲೀಸರು ನಟನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಅಕ್ಟೋಬರ್ 9 ರ ರಾತ್ರಿ, ಆರೋಪಿಗಳು ಉಬರ್ ಮತ್ತು ರಾಪಿಡೋ ಕ್ಯಾಪ್ಟನ್ ಅಪ್ಲಿಕೇಶನ್‌ಗಳ ಮೂಲಕ ಕ್ಯಾಬ್ ಬುಕ್ ಮಾಡಿದ್ದಾರೆ, ಅವರ ಪಿಕಪ್ ವಿಳಾಸವನ್ನು ಮಂಗಳೂರು, ಬೆಜೈ ನ್ಯೂ ರೋಡ್ ಎಂದು ನೀಡಿದ್ದಾರೆ. ದೂರುದಾರರಾದ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಪಿಕಪ್ ಸ್ಥಳವನ್ನು ದೃಢೀಕರಿಸಲು ಅಪ್ಲಿಕೇಶನ್ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ.
ಸಂಭಾಷಣೆಯ ಸಮಯದಲ್ಲಿ, ಹಿಂದಿಯಲ್ಲಿ ಮಾತನಾಡಿ ಅವರನ್ನು ಅಪಹಾಸ್ಯ ಮಾಡಿ, ಅವರನ್ನು ಮುಸ್ಲಿಂ ಉಗ್ರಗಾಮಿ ಎಂದು ಕರೆದರು ಎಂದು ಆರೋಪಿಸಲಾಗಿದೆ. ಜೊತೆಗೆ ಮಲಯಾಳಂನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಅಹ್ಮದ್ ಶಫೀಕ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2025 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 352 ಮತ್ತು 353(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.