ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಬೊಮ್ಮಸಂದ್ರದ ಶಾಲಾ ಶಿಕ್ಷಕಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದಾರೆ.
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಯಶೋಧ, ಗೃಹಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯರು ತಕ್ಷಣ ಅವರನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಸ್ಟಂಟ್ ಅಳವಡಿಸಿರುವುದಾಗಿ ತಿಳಿಸಿದ್ದಾರೆ.
ಸಮೀಕ್ಷೆ ವೇಳೆ ಶಿಕ್ಷಕಿ ಮನೆಯ ಮನೆಗೆ ತೆರಳಿ ನಿರಂತರ ದಾಖಲೆ ಮತ್ತು ಗಣತಿಯ ಕೆಲಸ ನಡೆಸುತ್ತಿದ್ದಾಗ ತೀವ್ರ ಒತ್ತಡ, ಊಟ, ನೀರಿಲ್ಲದ ಸ್ಥಿತಿ ಹಾಗೂ ದೀರ್ಘ ಕಾಲದ ಶ್ರಮದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಸಮೀಕ್ಷೆಯಲ್ಲಿ ತೊಡಗಿರುವ ಮತ್ತಿತರ ಶಿಕ್ಷಕರಿಗೂ ಮಾನಸಿಕ ಹಾಗೂ ದೈಹಿಕ ಒತ್ತಡ ಹೆಚ್ಚಾಗಿ, ಬಿಸಿಲು, ಮಳೆ ಮತ್ತು ಗಾಳಿಯಲ್ಲಿಯೂ ಮನೆ ಮನೆ ತೆರಳುವ ಕೆಲಸ ನಿರ್ವಹಿಸುತ್ತಿದ್ದಾರೆ. ಪೂರ್ಣಗೊಳ್ಳದ ಸಂದರ್ಭದಲ್ಲಿ ನೋಟೀಸ್ ಕಳುಹಿಸುವ ಸರ್ಕಾರದ ನಿಯಮವು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.