ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆರಂಭವಾಗಿರುವ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಆದಾಯದ ಲೆಕ್ಕದಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಗುರುವಾರ ಜಾತ್ರೆ ಆರಂಭಗೊಂಡಿದ್ದು, ಶುಕ್ರವಾರದಿಂದ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೇವಲ ಎರಡು ದಿನಗಳಲ್ಲಿ ದೇವಾಲಯಕ್ಕೆ ಬರೋಬ್ಬರಿ ₹2.24 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿರುವುದು ವಿಶೇಷ.
ಭಾನುವಾರ ಬೆಳಗ್ಗೆ 8 ಗಂಟೆಯವರೆಗಿನ ವರದಿಯ ಪ್ರಕಾರ, ದೇವಾಲಯವು ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ ಒಟ್ಟು ₹2,24,57,400 ಸಂಗ್ರಹಿಸಿದೆ.
ಆದಾಯದ ವಿವರ ಇಂತಿದೆ:
₹300 ವಿಶೇಷ ದರ್ಶನ: ಒಟ್ಟು 27,759 ಟಿಕೆಟ್‌ಗಳು ಮಾರಾಟವಾಗಿವೆ (ಆನ್‌ಲೈನ್: 4,499; ನೇರ ಖರೀದಿ: 23,260). ಈ ಮೂಲಕ ₹83,27,700 ಆದಾಯ ಬಂದಿದೆ.
₹1000 ವಿಶೇಷ ದರ್ಶನ: ಒಟ್ಟು 12,396 ಟಿಕೆಟ್‌ಗಳು ಮಾರಾಟವಾಗಿವೆ (ಆನ್‌ಲೈನ್: 3,912; ನೇರ ಖರೀದಿ: 8,484). ಈ ದರ್ಶನದ ಮೂಲಕ ₹1,23,96,000 ಸಂಗ್ರಹವಾಗಿದೆ.
ಲಾಡು ಪ್ರಸಾದ ಮಾರಾಟ: 17,337 ಲಾಡುಗಳು ಮಾರಾಟವಾಗಿದ್ದು, ಇದರ ಮೂಲಕ ₹17,33,700 ಆದಾಯ ಲಭಿಸಿದೆ.
ಈ ಮೂರು ದಿನಗಳ ಆರಂಭಿಕ ಅವಧಿಯಲ್ಲಿ ಭಕ್ತ ಸಾಗರವೇ ಹರಿದುಬಂದಿದ್ದು, ದೇವಾಲಯದ ಆದಾಯ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ.