ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಜನಪ್ರಿಯ ನಟ ವಿಜಯ್ ದೇವರಕೊಂಡ ಮತ್ತೆ ದೊಡ್ಡ ಪರದೆಯತ್ತ ಹೊಸ ಉತ್ಸಾಹದೊಂದಿಗೆ ಮರಳಿದ್ದಾರೆ. ‘ಕಿಂಗ್‌ಡಮ್’ ನಂತರ, ಅವರು ಯುವ ನಿರ್ದೇಶಕ ರವಿಕಿರಣ್ ಕೋಲ ಅವರ ನಿರ್ದೇಶನದಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ‘ರಾಜಾವರು ರಾಣಿಗಾರು’ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರವಿಕಿರಣ್ ಕೋಲ ಈ ಹೊಸ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದು, ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಹೈದರಾಬಾದ್‌ನಲ್ಲಿ ಇಂದು ನಡೆದ ಪೂಜಾ ಸಮಾರಂಭದಲ್ಲಿ ವಿಜಯ್ ದೇವರಕೊಂಡ, ಕೀರ್ತಿ ಸುರೇಶ್ ಹಾಗೂ ಚಿತ್ರತಂಡದವರು ಭಾಗವಹಿಸಿದರು.
‘ಲೈಗರ್’ ಮತ್ತು ‘ಖುಷಿ’ ಸಿನಿಮಾಗಳ ನಂತರ ಯಶಸ್ಸಿನ ಹುಡುಕಾಟದಲ್ಲಿದ್ದ ವಿಜಯ್ ದೇವರಕೊಂಡ ಈ ಬಾರಿ ಬಲವಾದ ಕಂಟೆಂಟ್‌ನೊಂದಿಗೆ ಮರುಪ್ರವೇಶ ಮಾಡುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ವಿಜಯ್ ಮತ್ತು ಕೀರ್ತಿ ಸುರೇಶ್ ಜೋಡಿಯ ಹೊಸ ಸಂಯೋಜನೆ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.