ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಕುಲದೀಪ್ ಯಾದವ್ 82 ರನ್ ಗಳಿಗೆ ಐದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ .
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 248 ರನ್ ಗಳಿಗೆ ಆಲೌಟ್ ಆಗಿದೆ. ಆ ಮೂಲಕ ವಿಂಡೀಸ್ ತಂಡ 270 ರನ್ ಗಳ ಹಿನ್ನಡೆಯಲ್ಲಿದ್ದು ಭಾರತ ಫಾಲೋಆನ್ ಹೇರಿದೆ.
ಈ ಪಂದ್ಯದಲ್ಲಿ ಕುಲದೀಪ್ ಯಾದವ್ 5 ವಿಕೆಟ್ ಗಳನ್ನು ಪಡೆದಿದ್ದು, ಇದು ಅವರ 5ನೇ 5 ವಿಕೆಟ್ ಗಳ ಗೊಂಚಲಾಗಿದೆ. ಆ ಮೂಲಕ ಭಾರತದ ರಿಸ್ಟ್ ಸ್ಪಿನ್ನರ್ ಅಪರೂಪದ ದಾಖಲೆ ನಿರ್ಮಿಸಿದ್ದು, ಅತೀ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಎಡಗೈ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಆ ಮೂಲಕ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಜಾನಿ ವಾರ್ಡ್ಲೆ ಅವರ ದಾಖಲೆಯನ್ನು ಕುಲದೀಪ್ ಯಾದವ್ ಹಿಂದಿಕ್ಕಿದ್ದಾರೆ. ಎಡಗೈ ಚೈನಾಮನ್ ಬೌಲರ್ ವಾರ್ಡೆಲ್‌ಗಿಂತ 13 ಟೆಸ್ಟ್‌ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ್ದಾರೆ, ಇದರಿಂದಾಗಿ ಚೈನಾಮನ್ ಬೌಲರ್‌ಗಳಲ್ಲಿ ಈ ಸಾಧನೆಯನ್ನು ವೇಗವಾಗಿ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ.