ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾನುವಾರದ ಆಗ್ರಾ ಭೇಟಿಯನ್ನು ದಿಢೀರ್ ರದ್ದುಗೊಳಿಸಿದ್ದಾರೆ.
ಆಫ್ಘನ್ ವಿದೇಶಾಂಗ ಸಚಿವರು ತಾಜ್ ಮಹಲ್ ನೋಡಲು ಇಂದು ಆಗ್ರಾಕ್ಕೆ ತೆರಳಬೇಕಿತ್ತು. ಆದ್ರೆ ಇದೀಗ ರದ್ದಾಗಿದ್ದು, ಇದಕ್ಕೆ ಕಾರಣ ತಿಳಿದುಬಂದಿಲ್ಲ.
ಮುತಾಕಿ ಉತ್ತರ ಪ್ರದೇಶದಿಂದ ದೆಹಲಿಗೆ ಹಿಂದಿರುಗುವ ಮೊದಲು ತಾಜ್ ಮಹಲ್ ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಳೆಯಲು ನಿರ್ಧರಿಸಲಾಗಿತ್ತು. ಆದರೆ ಭೇಟಿಯನ್ನು ದಿಢೀರನೇ ರದ್ದುಗೊಳಿಸಲಾಗಿದೆ.
ಈ ರದ್ದತಿಯನ್ನು ಜಿಲ್ಲಾಡಳಿತದ ಪ್ರೋಟೋಕಾಲ್ ಇಲಾಖೆ ಖಚಿತಪಡಿಸಿದೆ. ಆರು ದಿನಗಳ ಭಾರತ ಪ್ರವಾಸದಲ್ಲಿರುವ ಮುತಾಕಿ, ನಾಲ್ಕು ವರ್ಷಗಳ ಹಿಂದೆ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಹಿರಿಯ ತಾಲಿಬಾನ್ ಸಚಿವರಾಗಿದ್ದಾರೆ.