Thursday, October 30, 2025

Gaza War Is Over | ಗಾಜಾ ಯುದ್ಧ ಮುಗಿದಿದೆ: ಟ್ರಂಪ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು , ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಸದ್ಯ ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಪಶ್ಚಿಮ ಏಷ್ಯಾಕ್ಕೆ ಟ್ರಂಪ್‌ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್ ಫೋರ್ಸ್‌ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಅನ್ನೊ ವಿಶ್ವಾಸ ನಿಮಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು ಯುದ್ಧ ಮುಗಿದಿದೆ ಎಂದು ಉತ್ತರಿಸಿದ್ದಾರೆ. 

ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ. ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದುವರಿದು.. ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್‌ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್‌ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!