Saturday, December 20, 2025

ಗ್ರಾಮಕ್ಕೆ ಮಳೆ, ನಮಗೆ ಮದುವೆಗೆ ಕನ್ಯೆ ನೀಡಪ್ಪಾ! ಮಾದಪ್ಪನ ಮೊರೆ ಹೋದ ರೈತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೈತರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ನಿದರ್ಶನದಂತೆ ನೂರಾರು ರೈತರು ಹರಕೆ ಕಟ್ಟಿ ಮಾದಪ್ಪನ ದರುಶನ ಪಡೆದಿದ್ದಾರೆ.

ಗ್ರಾಮಕ್ಕೆ ಮಳೆ, ಯುವಕರಿಗೆ ಮದುವೆಗೆ ಕನ್ಯೆ ಸಿಗಲಿ ಎಂದು ಮೂರು ಗ್ರಾಮಗಳ ನೂರಾರು ಸಂಖ್ಯೆಯ ರೈತರು ಹಾಗೂ ಯುವಕರು ಪಾದಯಾತ್ರೆ ಮೂಲಕ ಮಾದಪ್ಪನ ಮೊರೆ ಹೋಗಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು, ಭೀಮನಬೀಡು, ಕೊಡಹಳ್ಳಿಯ ನೂರಾರು ಮಂದಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. 200 ಕಿ.ಮೀ.ಗಿಂತ ಹೆಚ್ಚು ದೂರ ಬರಿಗಾಲಿನಲ್ಲಿ‌ ಪಾದಯಾತ್ರೆ ನಡೆಸಲಾಗಿದ್ದು, ದಾರಿಯುದ್ದಕ್ಕೂ ಭಕ್ತರಿಂದ ಉಘೇ ಉಘೇ ಮಾದಪ್ಪ ಎಂಬ ಘೋಷಣೆ ಕೇಳಿಬಂದಿದೆ.

error: Content is protected !!