Wednesday, October 22, 2025

390 ರನ್​ಗಳಿಗೆ ವಿಂಡೀಸ್ ಆಲೌಟ್: ಭಾರತ ಗೆಲುವಿಗೆ 121 ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡ 390 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡದ ಗೆಲುವಿಗೆ 121 ರನ್​ಗಳ ಟಾರ್ಗೆಟ್ ನೀಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 518 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ 248 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಭಾರತ ಫಾಲೋ ಆನ್ ಹೇರಿ ವಿಂಡೀಸ್​ಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡ 390 ರನ್ ಕಲೆಹಾಕುವುದಲ್ಲದೆ, ಇನ್ನಿಂಗ್ಸ್ ಸೋಲಿನಿಂದ ಪಾರಾಗಿ, ಭಾರತಕ್ಕೆ 121 ರನ್​ಗಳ ಟಾರ್ಗೆಟ್ ನೀಡಿದೆ.

ಕ್ಯಾಂಪ್ಬೆಲ್, ಹೋಪ್ ಶತಕ
ಮೊದಲ ದಿನದಾಟದಂತ್ಯಕ್ಕೆ 3ನೇ ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದ್ದ ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ದಿನದಾಟದಂದು ವಿಂಡೀಸ್ ತಂಡ ಉಳಿದ 8 ವಿಕೆಟ್​​ಗಳಿಂದ 217 ರನ್ ಕಲೆಹಾಕಿತು. ವಿಂಡೀಸ್ ಪರ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯ್ ಹೋಪ್ ಶತಕ ಬಾರಿಸಿದರು. ಕ್ಯಾಂಪ್ಬೆಲ್ 115 ರನ್ ಬಾರಿಸಿದರೆ, ಹೋಪ್ 103 ರನ್ ಗಳಿಸಿ ಔಟಾದರು. ನಾಯಕ ರೋಸ್ಟನ್ ಚೇಸ್ 40 ರನ್ ಗಳಿಸಿದರೆ, ಜಸ್ಟಿನ್ ಗ್ರೀವ್ಸ್ ಅಜೇಯ 50 ರನ್ ಬಾರಿಸಿದರು. ಇದು ಗ್ರೀವ್ಸ್ ಅವರ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವಾಗಿತ್ತು.

ಭಾರತದ ಪರ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್, ಜಡೇಜ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.

error: Content is protected !!