Wednesday, October 22, 2025

ಮಾಜಿ ಸೈನಿಕರು-ಅವಲಂಬಿತರಿಗೆ ಗುಡ್ ನ್ಯೂಸ್: ಆರ್ಥಿಕ ನೆರವು ದ್ವಿಗುಣಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಂಕಿತ


ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡುವ ಆರ್ಥಿಕ ನೆರವನ್ನು ದ್ವಿಗುಣಗೊಳಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ಪ್ರತಿ ಫಲಾನುಭವಿಗೆ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿಗಳಿಂದ ಎಂಟು ಸಾವಿರ ರೂಪಾಯಿಗಳಿಗೆ ಅನುದಾನವನ್ನು ಏರಿಸಲಾಗಿದೆ. ಮಾಜಿ ಸೈನಿಕರ ಕಲ್ಯಾಣ ಇಲಾಖೆ ತಿಳಿಸಿದೆ.

ಇದು ನಿಯಮಿತ ಆದಾಯವಿಲ್ಲದ 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಮತ್ತು ಪಿಂಚಣಿ ಪಡೆಯದ ಮಾಜಿ ಸೈನಿಕರು ಮತ್ತು ಅವರ ವಿಧವೆಯರಿಗೆ ನಿರಂತರ ಜೀವಿತಾವಧಿಯ ಬೆಂಬಲವನ್ನು ಒದಗಿಸುತ್ತದೆ. ಇಬ್ಬರು ಅವಲಂಬಿತ ಮಕ್ಕಳಿಗೆ ಶಿಕ್ಷಣ ಅನುದಾನವನ್ನು ತಲಾ ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.


ವಿವಾಹ ಅನುದಾನವನ್ನು ಪ್ರತಿ ಫಲಾನುಭವಿಗೆ 50 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸಲಾಗಿದೆ. ಈ ವರ್ಷದ ನವೆಂಬರ್ 1 ರಿಂದ ಸಲ್ಲಿಸಲಾಗುವ ಅರ್ಜಿಗಳಿಗೆ ಪರಿಷ್ಕೃತ ದರಗಳು ಜಾರಿಗೆ ಬರುತ್ತವೆ ಎಂದು ಸಚಿವಾಲಯ ತಿಳಿಸಿದೆ. ಇದು ಸುಮಾರು 257 ಕೋಟಿ ರೂಪಾಯಿಗಳ ವಾರ್ಷಿಕ ಆರ್ಥಿಕ ಹೊರೆಯನ್ನು ಹೊಂದಿರುತ್ತದೆ. ಈ ನಿರ್ಧಾರವು ಪಿಂಚಣಿ ಪಡೆಯದ ಮಾಜಿ ಸೈನಿಕರು ಮತ್ತು ವಿಧವೆಯರಿಗೆ ಸಾಮಾಜಿಕ ಭದ್ರತಾ ಜಾಲವನ್ನು ಬಲಪಡಿಸುತ್ತದೆ. ಮಾಜಿ ಸೈನಿಕರ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಅದು ತಿಳಿಸಿದೆ.

error: Content is protected !!